ಕನ್ನಡಿಗರ ಬಹು ನಿರೀಕ್ಷೆಯ ಸಿನಿಮಾ 'ಕಾಟೇರ'. ಶಾರುಖ್ ಖಾನ್ ಸಿನಿಮಾ 'ಡಂಕಿ', ಪ್ರಭಾಸ್ ಸಿನಿಮಾ 'ಸಲಾರ್' ಅಬ್ಬರಕ್ಕೆ ಟಕ್ಕರ್ ಕೊಡುವುದಕ್ಕೆ ಪಣತೊಟ್ಟು ನಿಂತಿದೆ.
ನಟ ದರ್ಶನ್ ಮತ್ತು ಆರಾಧನಾ ರಾಮ್ ಜೋಡಿಯ ಕಾಟೇರ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದೆ. ಯಾವ ಜನುಮದ ಗೆಳತಿ.. ಸಾಹಿತ್ಯವಿರುವ ಈ ಹಾಡು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಈ ನಡುವೆ ಯಾವುದೇ ಸುಳಿವು ನೀಡದೆ, ಏಕಾಏಕಿ ಬಿಡುಗಡೆ ದಿನಾಂಕವನ್ನು ಘೋಷಿಸಿದ ಕಾಟೇರ ಸಿನಿಮಾ, ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಕಳೆದೊಂದು ವಾರದ ಹಿಂದೆ ಪಸಂದಾಗವ್ನೆ ಹಾಡು ಬಿಡುಗಡೆ ಆಗಿದ್ದು, ಇದೀಗ ಯಾವ ಜನ್ಮದ ಗೆಳತಿ ಹಾಡಿನ ಮೂಲಕ ದರ್ಶನ್ ಮತ್ತು ಆರಾಧನಾ ಎಂಟ್ರಿಯಾಗಿದೆ. ಆರಾಧನಾ ಮತ್ತು
ದರ್ಶನ್ ಆನ್ ಸ್ಕ್ರೀನ್ ಕೆಮಿಸ್ಟ್ರಿ ಸಖತ್ ವರ್ಕೌಟ್ ಸಹ ಆಗಿದ್ದು, ನೋಡುಗರಿಂದಲೂ ಮೆಚ್ಚುಗೆ ಸಿಗುತ್ತಿದೆ.
ರಾಬರ್ಟ್ ಸಿನಿಮಾ ಬಳಿಕ ಕಾಟೇರದಲ್ಲಿಯೂ ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್ ಒಂದಾಗಿದೆ. ರಾಬರ್ಟ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ನೂರು ಕೋಟಿ ಗಳಿಕೆ ಕಂಡಿದೆ ಎಂದು ತಂಡ ಹೇಳಿಕೊಂಡಿತ್ತು. ಇದೀಗ ಕಾಟೇರ ಸಿನಿಮಾ ಮೇಲೆ ಆ ನಿರೀಕ್ಷೆ ದ್ವಿಗುಣವಾಗಿದೆ. ಅದಕ್ಕೆ ಕಾರಣ; ನಿರ್ದೇಶಕ ತರುಣ್ ಮತ್ತು ಸಿನಿಮಾದ ಕಥೆ. ಇವೆರಡರಿಂದಲೇ ಕಾಟೇರ ಕೌತುಕ ಮೂಡಿಸಿದೆ.















