ಬಹುಭಾಷಾ ನಟಿ ಜಯಪ್ರದಾಗೆ ಚೆನ್ನೈ ಕೋರ್ಟ್ ಕೆಲ ತಿಂಗಳ ಹಿಂದಷ್ಟೇ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಇದೀಗ ಮತ್ತೆ ನಟಿಗೆ ಸಂಕಷ್ಟ ಎದುರಾಗಿದೆ. ಪದೇ ಪದೇ ವಾರೆಂಟ್ ನೀಡಿದರೂ ಜಯಪ್ರದಾ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ, ಅದಕ್ಕಾಗಿಯೇ ನ್ಯಾಯಾಲಯ ಈಗ ಜಯಪ್ರದಾ ಅವರನ್ನು ಬಂಧಿಸುವಂತೆ ಆದೇಶಿದೆ.
ಜಯಪ್ರದಾ ಅವರನ್ನು ಬಂಧಿಸಿ ಫೆಬ್ರವರಿ 27 ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಿದೆ. ವಿಶೇಷ ತಂಡ ರಚಿಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಲಾಗಿದೆ.
ನಿಗದಿತ ದಿನಾಂಕದಂದು ಜಯಪ್ರದಾ ನ್ಯಾಯಾಲಯಕ್ಕೆ ಬಂದಿರಲಿಲ್ಲ. ಆಕೆಯ ವಿರುದ್ಧ ಏಳನೇ ಬಾರಿಗೆ ಜಾಮೀನು ರಹಿತ ವಾರೆಂಟ್ ಹೊರಡಿಸಿದ ನಂತರವೂ ಅವರು ಸೋಮವಾರ ವಿಚಾರಣೆಗೆ ನ್ಯಾಯಾಲಯಕ್ಕೆ ಬಂದಿರಲಿಲ್ಲ. ಹಾಗಾಗಿಯೇ ಇದೀಗ ಪೊಲೀಸರು ಬಂಧಿಸುವಂತೆ ಕೋರ್ಟ್ ಆದೇಶ ನೀಡಿದೆ.
ಎರಡು ಪ್ರಕರಣಗಳಲ್ಲಿ ಜಯಪ್ರದಾ ಅವರು ಕಾನೂನು ಉಲ್ಲಂಘಿಸಿದ್ದಾರೆ. ಲೋಕಸಭೆ ಚುನಾವಣೆ 2019 ರಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿವೆ. ಈ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ನೋಟಿಸ್ ನೀಡಿದ ಬಳಿಕ ನಟಿ ಜಯಪ್ರದಾ ನ್ಯಾಯಾಲಯಕ್ಕೆ
ಹಾಜರಾಗಿಲ್ಲ.
ಪ್ರಕರಣ 2019ರ ಲೋಕಸಭೆ ಚುನಾವಣೆ ವೇಳೆ ಜಯಪ್ರದಾ ಅವರು ಬಿಜೆಪಿಯಿಂದ ರಾಂಪುರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಈ ವೇಳೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೂ ನೂರಪುರ ಗ್ರಾಮದಲ್ಲಿ ರಸ್ತೆ ಉದ್ಘಾಟನೆ ಮಾಡಿದ್ದಾರೆ ಎಂಬ ಆರೋಪವಿದೆ.
ಇದಲ್ಲದೇ ಮತ್ತೊಂದು ಘಟನೆ ಕೇಮರಿ ಪೊಲೀಸ್ ಠಾಣೆಯಿಂದ ನಡೆದಿದೆ. ಪಿಪಾಲಿಯಾ ಮಿಶ್ರಾ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜಯಪ್ರದಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಎರಡೂ ಪ್ರಕರಣಗಳು ಲೋಕಸಭೆ ಚುನಾವಣೆ 2019 ರಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿವೆ. ಈ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ನೋಟಿಸ್ ನೀಡಿದ ಬಳಿಕ ನಟಿ ಜಯಪ್ರದಾ ನ್ಯಾಯಾಲಯಕ್ಕೆ ಹಾಜರಾಗಿಲ್ಲ, ಇದೀಗ ಅವರನ್ನು ಬಂಧಿಸುವಂತೆ ಕೋರ್ಟ್ ಆದೇಶ ನೀಡಿದೆ.









