ಮಡಿಕೇರಿ ಮೂಲದ ನಟಿ ಜ್ಯೋತಿ ರೈ ಕನ್ನಡ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಜನಮನ ಗೆದ್ದರು. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಒಂದು ಮಗುವಿನ ತಾಯಿಯಾದರೂ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿ ಮನೆ ಮಾತಾದರು. ಇದೀಗ ತೆಲುಗು ಕಿರುತೆರೆಯಲ್ಲಿ ಜ್ಯೋತಿ ಗುರುತಿಸಿಕೊಂಡಿದ್ದಾರೆ.
ತೆಲುಗಿನ 'ಗುಪ್ಪೆಡಂತ ಮನಸು' ಧಾರಾವಾಹಿ ಆಕೆಗೆ ಅಲ್ಲಿ ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು. ಜಗತಿ ಎನ್ನುವ ಪಾತ್ರದಲ್ಲಿ ಜ್ಯೋತಿ ರೈ ತೆಲುಗು ವೀಕ್ಷಕರ ಮನಗೆದ್ದಿದ್ದಾರೆ. ಕಿರುತೆರೆಯಲ್ಲಿ ಸೀರೆಯಲ್ಲಿ ಕಂಗೊಳಿಸುವ ಚೆಲುವೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಹಾಟ್ ಶೋ ಮೂಲಕ ಹುಬ್ಬೇರಿಸುತ್ತಿರುತ್ತಾರೆ. ಆಕೆಯ ಪೋಸ್ಟ್ಗಳಿಗೆ ಭಾರೀ ಟೀಕೆ ಕೂಡ ವ್ಯಕ್ತವಾಗುತ್ತಿರುತ್ತದೆ.
ಈಗಾಗಲೇ ಮದುವೆಯಾಗಿ ಒಂದು ಮಗುವಿನ ತಾಯಿಯಾಗಿರುವ ಜ್ಯೋತಿ ರೈ ನಿರ್ದೇಶಕರೊಬ್ಬರ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಸುಕು ಪೂರ್ವಜ್ ಎನ್ನುವ ನಿರ್ದೇಶಕರ ಜೊತೆ ಲವ್ವಿ ಡವ್ವಿ ನಡೆಸುತ್ತಿರುವುದಾಗಿ ಪದೇ ಪದೆ ಸುದ್ದಿ ಆಗುತ್ತದೆ. ಆತನೊಟ್ಟಿಗೆ ಇರುವ ಫೋಟೊಗಳನ್ನು ಆಕೆ ಆಗಿಂದಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಎಂಗೇಜ್ಮೆಂಟ್ ಆಗಿರುವುದಾಗಿಯೂ ಹಿಂಟ್ ಕೊಡುವ ಕೆಲಸ ಮಾಡುತ್ತಿರುತ್ತಾರೆ.
ಧಾರಾವಾಹಿಗಳ ಜೊತೆಗೆ ಇತ್ತೀಚೆಗೆ ಸಿನಿಮಾ ಹಾಗೂ ವೆಬ್ ಸೀರಿಸ್ಗಳಲ್ಲಿ ಕೂಡ ಜ್ಯೋತಿ ರೈ ನಟಿಸುತ್ತಿದ್ದಾರೆ. 'ಪ್ರೆಟಿ ಗರ್ಲ್' ಎನ್ನುವ ವೆಬ್ ಸೀರಿಸ್ನಲ್ಲಿ ಸಖತ್ ಬೋಲ್ಡ್
ಲುಕ್ನಲ್ಲಿ ಜ್ಯೋತಿ ರೈ ನಟಿಸುತ್ತಿದ್ದಾರೆ. ಸೀರಿಸ್ ಪೋಸ್ಟರ್ಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಬರೀ ಪೋಸ್ಟರ್ಗಳಿಂದಲೇ ಕ್ರೈಂ ಥ್ರಿಲ್ಲರ್ ಸೀರಿಸ್ ಬಗ್ಗೆ ಕುತೂಹಲ ಕೆರಳುವಂತೆ ಮಾಡುತ್ತಿದ್ದಾರೆ.
ಪ್ರೆಟಿ ಗರ್ಲ್' ವೆಬ್ ಸೀರಿಸ್ ಬಗ್ಗೆ ಜ್ಯೋತಿ ರೈ ಹೊಸ ಪೋಸ್ಟ್ ಸಖತ್ ವೈರಲ್ ಆಗ್ತಿದೆ. "ಶೀಘ್ರದಲ್ಲೇ ಅತ್ಯಂತ ಭಯಾನಕ, ವಿಲಕ್ಷಣವಾದ, ರೋಚಕವಾದ, ಗ್ಲಾಮರ್ ಡೋಸ್ಡ್ ಬ್ಲಡ್ ಬಾತ್ ಥ್ರಿಲ್ಲರ್ಗಾಗಿ ಸೀಟ್ ಬೆಲ್ಡ್ ಧರಿಸಿ ಕಾಯುತ್ತಿರಿ. ಸದ್ಯಕ್ಕೆ ಚಿತ್ರೀಕರಣ ನಡೆಯುತ್ತಿದೆ. ಇನ್ನೂ 3 ಶೆಡ್ಯೂಲ್ಗಳು ಬಾಕಿ ಇವೆ. ವೆಬ್ ಸೀರಿಸ್ ಗ್ಲಿಂಪ್ಸ್ ಸರಿಯಾದ ಸಮಯದಲ್ಲಿ ಬಿಡುಗಡೆ ಆಗುತ್ತದೆ. ಅದಕ್ಕಾಗಿ ದಯವಿಟ್ಟು ತಾಳ್ಮೆಯಿಂದಿರಿ. ಇಂತಾದೊಂದು ಮಲ್ಟಿಲೇಯರ್ಡ್ ರೋಲ್ ಡಿಸೈನ್ ಮಾಡಿದ್ದಕ್ಕಾಗಿ ನನ್ನ ತಂಡಕ್ಕೆ ಧನ್ಯವಾದ. ವಿಭಿನ್ನ ರೀತಿಯಲ್ ಕಾಣಿಸಿಕೊಳ್ಳುವುದನ್ನು ನಾನು ಸವಾಲಾಗಿ ಸ್ವೀಕರಿಸಿದೆ. ನೀವು ಶೀಘ್ರದಲ್ಲೇ ಅದನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ" ಎಂದು ಬರೆದುಕೊಂಡಿದ್ದಾರೆ.









