Coastal Bulletin

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ನಟ ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಹರಿಪ್ರಿಯಾ ಅಥವಾ ವಸಿಷ್ಠ ಯಾವುದೇ ಮಾಹಿತಿ ರಿವೀಲ್ ಮಾಡಿರಲಿಲ್ಲ. ಇದೀಗ ಇಬ್ಬರ ನಿಶ್ಚಿತಾರ್ಥದ ಫೋಟೋಗಳು ರಿವೀಲ್ ಆಗಿದೆ.

ಬೆಂಗಳೂರಿನ ಹರಿಪ್ರಿಯಾ ನಿವಾಸದಲ್ಲಿಯೇ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಸಿಂಪಲ್ ಆಗಿ ನಡೆದ ನಿಶ್ಚಿತಾರ್ಥದ ಸಂಭ್ರಮದಲ್ಲಿ ಹರಿಪ್ರಿಯಾ ಮತ್ತು  ವಸಿಷ್ಠ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ವಸಿಷ್ಠ ಮತ್ತು ಹರಿಪ್ರಿಯಾ ಕುಟುಂಬದವರು ಮಾತ್ರ ಹಾಜರಿದ್ದರು. 


ನಿಶ್ಚಿತಾರ್ಥ ಸುದ್ದಿ ವೈರಲ್ ಆದ ಬಳಿಕ ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಸಿಂಹದ ಪೋಟೋ ಶೇರ್ ಮಾಡಿ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎನ್ನುವ ಸಾಲನ್ನು ಶೇರ್ ಮಾಡಿದ್ದರು. ಈ ಮೂಲಕ ಹರಿಪ್ರಿಯಾ ಪರೋಕ್ಷವಾಗಿ ವಸಿಷ್ಠ ಸಿಂಹ ಜೊತೆ ಎಂಗೇಜ್ ಆದ ವಿಚಾರವನ್ನು ಹೇಳಿದ್ದರು. ಅಭಿಮಾನಿಗಳು ಕಾಮೆಂಟ್ ಮಾಡಿ ಇಷ್ಟು ಹಿಂಟ್ ಕೊಟ್ಟರೆ ಸಾಕು ಗೊತ್ತಾಗುತ್ತೆ. ಇಬ್ಬರಿಗೂ ಅಭಿನಂದನೆಗಳು ಎಂದು

ಹೇಳಿದ್ದರು.


ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಪ್ರೀತಿ ವಿಚಾರ ಬಹಿರಂಗವಾದ ನಂತರ ಇಬ್ಬರೂ ದುಬೈ ಪ್ರವಾಸಕ್ಕೆ ಹಾರಿದ್ದರು. ಇಬ್ಬರೂ ಕೈ ಕೈ ಹಿಡಿದು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಬ್ಬರೂ ಮದುವೆ ಶಾಪಿಂಗ್ ಮಾಡಲು ದುಬೈಗೆ ಹಾರಿದ್ದರು ಎನ್ನಲಾಗಿದೆ. ದುಬೈನಿಂದ ವಾಪಾಸ್ ಬರುತ್ತಿದ್ದಂತೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರ ಸಮ್ಮುಮುಖದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಹರಿಪ್ರಿಯಾ ಮತ್ತು ವಸಿಷ್ಠ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಮದುವೆಯಾಗುವ ಸಾಧ್ಯತೆ ಇದೆ.

Leave a Comment