ಬಂಟ್ವಾಳ ಸಂತ ಡೊಮಿನಿಕ್ ಆಂಗ್ಲ ಮಾಧ್ಯಮ ಶಾಲೆ ಮರಿಯಾಶ್ರಮ ಬಡಕಬೈಲ್ ಇದರ ಶಾಲಾ ವಾರ್ಷಿಕೋತ್ಸವ ಸಮಾರಂಭವು ಬಹಳ ಅದ್ದೂರಿಯಾಗಿ ಡಿ.02ರಂದು ಶುಕ್ರವಾರ ಶಾಲಾ ಮೈದಾನದಲ್ಲಿ ನಡೆಯಿತು.
ಪೂರ್ವಾಹ್ನ ಶಾಲಾ ಪ್ರಾಂಶುಪಾಲರಾದ ವಂದನೀಯ ಫಾದರ್ ಫ್ರಾನ್ಸಿಸ್ ಅರುಣ್ ಡಿಸೋಜಾ ಶಾಲಾ ಧ್ವಜಾರೋಹಣವನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಪರಾಹ್ನ 5.30ಯಿಂದ ಸಭಾ ಕಾರ್ಯಕ್ರಮವು ಶಾಲಾ ಮೈದಾನದ ವೇದಿಕೆಯಲ್ಲಿ ಫಾದರ್ ಡೇನಿಯಲ್ ವೇಗಸ್ . ಇವರ ಅಧ್ಯಕ್ಷತೆಯಲ್ಲಿ ಜರಗಿತು . ಮುಖ್ಯ ಅತಿಥಿಗಳಾಗಿ ಫಾದರ್ ಪ್ರಸಾದ್ ಜಾರ್ಜ್, ಮಾಜಿ ಸಚಿವರಾದ ಬಿ ರಮನಾಥ ರೈ, ಮೊಡಂಕಾಪು ಚರ್ಚಿನ ಧರ್ಮ ಗುರುಗಳಾದ ಫಾದರ್ ವಲೆರಿಯನ್ ಡಿಸೋಜಾ, ಬೆಳ್ಳೂರು ಸಂತ ಮೈಕಲ್ ರ ಚರ್ಚಿನ ಧರ್ಮ ಗುರುಗಳಾದ ಫಾದರ್ ಪ್ಯಾಟ್ರಿಕ್ ಸಿಕ್ವೇರಾ.
ಸೈಂಟ್ ಜೋಸೆಫ್ ಕಾನ್ವೆಂಟ್ ಮರಿಯಾಶ್ರಮದ ಸಿಸ್ಟರ್ ಮರಿಯ ಪೌಲ್ ಸಿಲ್ವಾ,ಶಾಲಾ ಸಂಚಾಲಕರಾದ ಫಾದರ್ ರೆಜಿನಾಲ್ಡ್ ಡಿ ಮೇಲ್ಲೊ, ಆಡಳಿತ ಅಧಿಕಾರಿ ಫಾದರ್ ಸುನಿಲ್ ಕ್ರಿಸ್ಟೋಫರ್ ಡಿ ಸೋಜ,ಫಾದರ್ ಫ್ರಾನ್ಸಿಸ್ ಅರುಣ್ ಡಿ ಸೋಜ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ವಿನೋದಾವಳಿ ಕಾರ್ಯಕ್ರಮಕ್ಕೆ ಮೆರಗನ್ನು ನೀಡಿತು. ಶಿಕ್ಷಕಿ ಜ್ಯೋತಿ ಡಿ ಮೇಲ್ಲೊ ಸ್ವಾಗತಿಸಿ, ಶಾಲಾ ನಾಯಕ ಲೆಸ್ಟರ್ ಮೊಂತೆರೊ ಧನ್ಯವಾದವಿತ್ತರು,ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕ,ಶಿಕ್ಷಕಿ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.ಶಾಲಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.















