ಬಂಟ್ವಾಳ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ನಡೆಯುವ ಭಜನಾ ಕಮ್ಮಟದಲ್ಲಿ ಕಳ್ಳಿಗೆ ಗ್ರಾಮದ ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ, ಬ್ರಹ್ಮರಕೂಟ್ಲು ಇಲ್ಲಿನ ಭಜನಾ ಮಂಡಳಿಗೆ “ಬಂಟ್ವಾಳ ತಾಲೂಕಿನ ಶ್ರೇಷ್ಠ ಭಜನಾ ಮಂಡಳಿ ಸಾಧಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ತಾಲೂಕಿಗೊಂದರಂತೆ ಆಯ್ಕೆ ಮಾಡಲಾದ ಒಟ್ಟು 24 ಭಜನಾ ತಂಡಗಳಲ್ಲಿ ಬಂಟ್ವಾಳ ತಾಲೂಕಿನಿಂದ ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂಡಳಿ ಆಯ್ಕೆಯಾಗಿದ್ದು, ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ.ಡಾ ಡಿ ವೀರೇಂದ್ರ ಹೆಗ್ಗಡೆ, ಮಾಣಿಲ ಮೋಹನ ದಾಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ
ಪ್ರಶಸ್ತಿ ಪತ್ರದೊಂದಿಗೆ ಮಂಡಳಿಯನ್ನು ಗೌರವಿಸಲಾಯಿತು
ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ಶಶಿಧರ್ ಬಿ., ಗೌರವ ಸಲಹೆಗಾರ ನವೀನ್ ಬಂಗೇರ ಪಲ್ಲ, ಪ್ರಧಾನ ಕಾರ್ಯದರ್ಶಿ ಹೇಮಂತ್ ಸನಿಲ್ ದರಿಬಾಗಿಲು ಸೇರಿದಂತೆ ಪ್ರಮುಖರಾದ ಮಾಧವ ಎಂ. ಪೂಜಾರಿ ವಳವೂರು, ಹರೀಶ್ ದರಿಬಾಗಿಲು, ಸತೀಶ್ ವಳವೂರು, ಮನೋಹರ ಪುಡಿಕೆಲ್ಲಾಯಕೋಡಿ, ವಾರಿಜ ರಮೇಶ್ ಪೆರಿಯೊಡಿಬೀಡು, ಸುನಂದಾ ಶಶಿಧರ್ ಬ್ರಹ್ಮರಕೂಟ್ಲು ಮತ್ತಿತರರು ಉಪಸ್ಥಿತರಿದ್ದರು











