ಚೀನಾದಲ್ಲಿ ಭಾರೀ ಮಳೆಯಾಗುತ್ತಿದ್ದು ಪ್ರವಾಹದ ಅಬ್ಬರದಿಂದ ನಲುಗುತ್ತಿದೆ.ಸಾವಿರ ವರ್ಷಗಳ ಇತಿಹಾಸದಲ್ಲಿಯೇ ಕಂಡು ಕೇಳರಿಯದ ರೀತಿಯಲ್ಲಿ ವರುಣ ಆರ್ಭಟಿಸುತ್ತಿದ್ದಾನೆ.
ನದಿಗಳು ಮತ್ತು ಅಣೆಕಟ್ಟುಗಳು ಉಕ್ಕಿ ಹರಿಯುತ್ತಿದ್ದು ಅಪಾಯದ ಮುನ್ಸೂಚನೆ ನೀಡಿವೆ.51 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಎಂಟು ಮಂದಿ ಕಣ್ಮರೆಯಾಗಿದ್ದಾರೆ. ಪಟ್ಟಣಗಳು, ನಗರಗಳು ನೀರಿನಲ್ಲಿ ಆವೃತವಾಗಿದ್ದು, ಅನೇಕ ಕಡೆ ಭೂಕುಸಿತದಿಂದ ಅನಾಹುತಗಳು ಸಂಭವಿಸಿವೆ. ಸುರಂಗ ಮಾರ್ಗಗಳಲ್ಲಿ ವಾಹನಗಳು ಮುಳುಗಿ ಪ್ರಯಾಣಿಕರು ಹೊರಗೆ ಬರಲಾಗದೆ ಪರದಾಡಿದ್ದಾರೆ.
style="width: 268px;" data-filename="images (34).jpeg">
ಸುಮಾರು 10 ಕೋಟಿ ಜನಸಂಖ್ಯೆ ಹೊಂದಿರುವ ಹೆನಾನ್ ಪ್ರಾಂತ್ಯದಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆ ಜನರನ್ನು ತಲ್ಲಣಗೊಳಿಸದ್ದು ಸಾವಿರಾರು ಜನರು ನೆಲೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಈ ಒಂದೇ ಪ್ರದೇಶದಲ್ಲಿ ಈವರೆಗೂ 190 ಮಿಲಿಯನ್ ಡಾಲರ್ ಹಾನಿ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.















