Coastal Bulletin

ಬೆಂಗಳೂರು: ನೂತನ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಬಸವರಾಜ ಬೊಮ್ಮಾಯಿ ಅವರು ಮಹತ್ವದ ನಿರ್ಣಯಗಳನ್ನು ಘೋಷಿಸಿದ್ದಾರೆ.

 ಸರ್ಕಾರದ ಮುಂದಿನ ಯೋಜನೆ, ಗುರಿ, ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ಕರೊನಾ, ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ವಿಧಾನಸೌಧದಲ್ಲಿ ಹಿರಿಯ ಆಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ ರೈತರ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು. ಅವರು ಮುಖ್ಯವಾಹಿನಿಯಲ್ಲಿ ಇರಬೇಕು. ಆ ನಿಟ್ಟಿನಲ್ಲಿ ಅವರ ಉನ್ನತ ಶಿಕ್ಷಣಕ್ಕೆ ನೆರವಾಗಲೆಂದು ರೈತ ಮಕ್ಕಳಿಗೆ ಇನ್ಮು ವಿದ್ಯಾರ್ಥಿ ವೇತನ ನೀಡಲಾಗುತ್ತೆ ಎಂದು ನೂತನ ಯೋಜನೆಯಲ್ಲಿ ಘೋಷಣೆ ಮಾಡಿದರು. ಅಲ್ಲದೆ ಸಂಧ್ಯಾ ಸುರಕ್ಷಾ, ಅಂಗವಿಕಲರ, ವಿಧವಾ ವೇತನ ಹೆಚ್ಚಳ ಮಾಡಿ ಘೋಷಿಸಿ

ಜನಪರ ಆಡಳಿತದ ಭರವಸೆ ಮೂಡಿಸಿದ್ದಾರೆ.

ಸಿಎಂ ಘೋಷಣೆ  ಮಾಡಿದ ಮಹತ್ವದ 4 ನಿರ್ಣಯ ವಿವರ

  • ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ 1000 ಕೋಟಿ ಹೆಚ್ಚುವರಿ ವೆಚ್ಚದ ಯೋಜನೆ
  • ಸಂಧ್ಯಾ ಸುರಕ್ಷಾ ಯೋಜನೆ 1000 ರೂ ಇಂದ 1200 ರೂ ಹೆಚ್ಚಳ- 862 ಕೋಟಿ ವೆಚ್ಚ. 35. 98 ಲಕ್ಷ ಫಲಾನುಭವಿಗಳಿಗೆ ಅನುಕೂಲ.
  • ವಿಧವಾ ವೇತನ 600 ರಿಂದ 800ಕ್ಕೆ ಹೆಚ್ಚಳ- 408. ಕೋಟಿ, 17 ಲಕ್ಷ
  • ಅಂಗವಿಕಲರಿಗೆ 600 ರಿಂದ 800 ಕೋಟಿ ರೂ- 3.66 ಫಲಾನುಭವಿಗಳಿಗೆ ಅನುಕೂಲ. 90 ಕೋಟಿ ಹೆಚ್ಚುವರಿ ಹೊರೆ.


Leave a Comment