ಬೆಂಗಳೂರು : ಈಶ್ವರಪ್ಪ, ಶೆಟ್ಟರ್ ಪಕ್ಷದ ಎರಡು ಕಣ್ಣುಗಳಿದ್ದಂತೆ, ಆಡಿಯೋ ನನ್ನದಲ್ಲ,ವೈರಲ್ ಆಗಿರುವ ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರವಾಗಿ ಅವರು ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿ ನಾಯಕತ್ವ ಬದಲಾವಣೆ ಕುರಿತು ನಮ್ಮಲ್ಲಿ ಯಾವುದೇ ಚರ್ಚೆಗಳಿಲ್ಲ. ನಮ್ಮ ಪಕ್ಷಕ್ಕೆ ಯಡಿಯೂರಪ್ಪ ಆತ್ಮವಿದ್ದಂತೆ. ಯಡಿಯೂರಪ್ಪ ನಮ್ಮ ಸರ್ವ ಸಮ್ಮತದ ನಾಯಕ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಪಾರ್ಟಿಯ ಎರಡು ಕಣ್ಣುಗಳು ಇದ್ದಂತೆ,ತನಿಖೆಯಾಗದೇ ಯಾರ ಬಗ್ಗೆಯೂ ಸಂಶಯ ವ್ಯಕ್ತಪಡಿಸಲ್ಲ. ತನಿಖೆ ಮೂಲಕ ಸತ್ಯ ಹೊರಬರಲಿ. ಎಲ್ಲದಕ್ಕೂ ತನಿಖೆಯ ಬಳಿಕ ಉತ್ತರ ನೀಡುತ್ತೇನೆ. ನ್ಯಾಯಾಲಯದ ಮೊರೆ ಹೋಗುವ ಬಗ್ಗೆಯೂ ಚಿಂತನೆ ನಡೆಸಿದ್ದೇನೆ ಎಂದರು.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಈ
ಬಗ್ಗೆ ತನಿಖೆಯಾಗಬೇಕು, ಬಳಿಕ ಆಡಿಯೋದ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಎಂದು ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಹೇಳಿದರು.
ಆಡಿಯೋದಲ್ಲಿ ಇರುವುದೇನು?
ನಳಿನ್: ಯಾರಿಗೂ ಹೇಳಲು ಹೋಗಬೇಡಿ.
ಈಶ್ವರಪ್ಪ, ಜಗದೀಶ ಶೆಟ್ಟರ್.... ಆ ತಂಡವನ್ನೇ ತೆಗೆಯುತ್ತೇವೆ.
ಎಲ್ಲ ಹೊಸ ತಂಡ ಮಾಡುತ್ತಿದ್ದೇವೆ. ಹೇಳಲು ಹೋಗಬೇಡಿ. ಈಗ ಸದ್ಯಕ್ಕೆ ಯಾರಿಗೂ ಕೊಡಬೇಡಿ ಅಂದಿದ್ದಾರೆ...
(ನಗು)..
ಇಲ್ಲ. ಯಾರಿಗೂ ಹೇಳಬೇಡಿ. ಬೇಡ. ಹೂಂ... ಏನೂ ತೊಂದರೆ ಇಲ್ಲ.
ಯಾರಿಗೂ ಹೆದರಬೇಡಿ. ಯಾರಾದರೂ ಸರಿ ಇನ್ನು ನಮ್ಮ ಕೈಯಲ್ಲೇ ಎಲ್ಲ. ಮೂರು ಹೆಸರುಗಳು ಇವೆ. ಅದರಲ್ಲಿ ಯಾವುದಾದರೂ ಆಗುವ ಸಾಧ್ಯತೆಗಳಿವೆ.
ಇಲ್ಲ.. ಇಲ್ಲ. ಇಲ್ಲಿಂದ ಯಾರನ್ನೂ ಮಾಡುವುದಿಲ್ಲ. ದೆಹಲಿಯಿಂದಲೇ ಹಾಕುತ್ತಾರೆ..

















