ಬಾಗಿಲು
ಬಾಗಿಲು ಎಂಬ ಶಬ್ದವು ಎಷ್ಟೊಂದು ಮಹತ್ವಪೂರ್ಣವಾಗಿದೆ. ಅದೊಂದು ಭದ್ರತೆಯ ವಸ್ತುವಾಗಿದೆ. ಅಥವಾ ರಕ್ಷಣೆಯ ಸಂಕೇತವಾಗಿದೆ. ಮನೆಗೆ ಹಲವಾರು ಬಾಗಿಲುಗಳಿರುತ್ತದೆ. ಮುಂಬಾಗಿಲು ಮತ್ತು ಹಿಂಬಾಗಿಲು ಎಂಬುದು ಮನೆಯ ಪ್ರಾಮುಖ್ಯ ಬಾಗಿಲಾಗಿದೆ. ಹಿಂದಿನ ಕಾಲದಲ್ಲಿ ಮನೆಗಳಿಗೆ ಅದರಲ್ಲೂ ಸೋಗೆಯ ಮನೆಗಳಿಗೆ ಮುಂಬಾಗಿಲು ಎಂಬ ಒಂದೇ ಒಂದು ಬಾಗಿಲು ಇರುತ್ತಿತ್ತು. ಈಗಂತೂ ಪ್ರತಿಯೊಂದು ಮನೆಗಳಿಗೆ ಹಲವು ಬಾಗಿಲುಗಳು. ಬಾಗಿಲು ಹಲವು ಬಗೆಯ ವಿಶೇಷತೆಯನ್ನು ಹೊಂದಿದೆ. ತಟ್ಟಿಯ ಬಾಗಿಲು ಮೊದಲಿನ ಕಾಲದಲ್ಲಿ ಸೋಗೆಯ ಮನೆಗಳಿಗೆ ಉಪಯೋಗಿಸುತ್ತಿದ್ದರು. ಎರಡು ಬದಿಯಿಂದ ಮುಚ್ಚುವ ಬಾಗಿಲುಗಳು ಉಂಟು. ಈಗಂತೂ ಒಂದೇ ಬದಿಯಲ್ಲಿ ಇರುವ ದೊಡ್ಡ ಬಾಗಿಲನ್ನು ಒಂದೇ ಕೈಯಲ್ಲಿ ಮುಚ್ಚಬಹುದು. ಎರಡು ಕೈಯಿಂದ ಬಾಗಿಲನ್ನು ಒಂದೇ ಕೈಯಲ್ಲಿ ಮುಚ್ಚಬಹುದು. ಎರಡು ಕೈಯಿಂದ ಬಾಗಿಲು ಮುಚ್ಚುವ ಕಷ್ಟ ಬೇಡವೆಂದು ಒಂದೇ ಕೈಯಲ್ಲಿ ಮುಚ್ಚುವ ಬಾಗಿಲು ಬಂತು.ಚಿನ್ನ, ಹಣವನ್ನು ಕಪಾಟಿನ ಒಳಗೆ ಇಡುತ್ತೇವೆ. ಅದನ್ನು ಬಾಗಿಲಿನ ಸಹಾಯದಿಂದ ಭದ್ರವಾಗಿ ಮುಚ್ಚುತ್ತೇವೆ. ಚಿನ್ನ, ಹಣವೇ ಆಗಬೇಕೆಂದಿಲ್ಲ ಕೆಲವು ಮಹತ್ವವಾದ ಪತ್ರವನ್ನು ನಾವು ಹೀಗೆಯೇ ಬಾಗಿಲಿನ ಸಹಾಯದಿಂದ ಭದ್ರವಾಗಿ ಮುಚ್ಚುತ್ತೇವೆ.
ಬಾಗಿಲುಗಳಲ್ಲಿ ಹಲವು ವಿಧದ ಬಾಗಿಲುಗಳಿವೆ. ಮರದ ಬಾಗಿಲು, ಗಾಜಿನ ಬಾಗಿಲು, ಕಬ್ಬಿಣದ ಬಾಗಿಲು ಇತ್ಯಾದಿ. ಪ್ಲಾಸ್ಟಿಕ್ ಬಾಗಿಲು ಕೂಡಾ ಇದೆ. ಕಿಟಕಿಗಳಿಗೆ ದೊಡ್ಡದು, ಚಿಕ್ಕದು ಎಂಬ ಬಾಗಿಲುಗಳಿವೆ. ಹಲವಾರು ಆಕೃತಿಗಳಿಂದಲೂ ಬಾಗಿಲನ್ನು ತಯಾರಿಸುತ್ತಾರೆ. ನಾವು ಬಾಗಿಲನ್ನು ಮನೆಗಳಿಗೆ ಇರುವ ಬಾಗಿಲೆಂದೇ ತಿಳಿದುಕೊಳ್ಳಬೇಕಿಲ್ಲ. ಅಂದರೆ ಇನ್ನೊಂದು ರೀತಿಯ ಬಾಗಿಲುಗಳೆಂದರೆ ಕಣ್ಣನ್ನು ನಾವು ರೆಪ್ಪೆಯೆಂಬ ಬಾಗಿಲಿಂದ ಮುಚ್ಚುತ್ತೇವೆ. ಬಾಯಿಯನ್ನು ತುಟಿ ಎಂಬ ಬಾಗಿಲಿನಿಂದ ಮುಚ್ಚುತ್ತೇವೆ. ಬ್ಯಾಗ್‌ಗಳನ್ನು ‘ಜಿಪ್’ ಎಂಬ ಬಾಗಿಲಿನಿಂದ ಮುಚ್ಚುತ್ತೇವೆ. ಇದರರ್ಥ ರೆಪ್ಪೆ, ತುಟ್ಟಿ, ಜಿಪ್ ಎಂಬುದು ಮನೆಗೆ ಬಾಗಿಲು ಹೇಗೆ ರಕ್ಷಣೆಯೋ, ಹಾಗೆ ಕಣ್ಣು, ಬಾಯಿ,
ಬ್ಯಾಗ್‌ಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ.
ಬ್ಯಾಗ್‌ಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ.
ವಾಹನಗಳಲ್ಲಿಯೂ ಕೂಡ ಬಾಗಿಲುಗಳಿವೆ. ಒಂದೇ ವೇಳೆ ಕಣ್ಣಿಗೆ ರೆಪ್ಪೆ ಎಂಬ ಬಾಗಿಲು ಇಲ್ಲದೆ ಇರುತ್ತಿದ್ದರೆ ಕಣ್ಣಿಗೆ ಅನೇಕ ರೀತಿಯ ಕಸಗಳು ಬಿದ್ದು ಎಷ್ಟೊಂದು ತೊಂದರೆ ಪಡಬೇಕಾಗುತ್ತದೆ. ಅದೇ ನಮ್ಮ ಕಣ್ಣಿಗೆ ರೆಪ್ಪೆ ಇದ್ದರೆ ನಮ್ಮ ಕಣ್ಣಿಗೆ ಭದ್ರತೆ ಸಿಗುತ್ತದೆ. ಹಾಗೆಯೇ ಮನೆಗೆ ಬಾಗಿಲೇ ಇಲ್ಲವೆಂದರೆ ಆ ಮನೆಗೆ ಯಾವತ್ತೂ ಭಯ. ಅದೇ ಆ ಮನೆಗೆ ಬಾಗಿಲು ಇದ್ದರೆ ಆ ಮನೆಯವರಿಗೆ ಎಷ್ಟೊಂದು ನೆಮ್ಮದಿ, ಹೀಗೆ ಬಾಗಿಲು ಎಂಬುದು ಎಷ್ಟೊಂದು ಪ್ರಾಮುಖ್ಯ ಎಂಬುವುದನ್ನು ನಾವು ಹಲವು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು.
ಹುಡುಗಿಗೆ ಕೂದಲು ಭೂಷಣ, ಹಣೆಗೆ ಕುಂಕುಮವು ಭೂಷಣ ಹಾಗೆಯೇ ಒಂದು ಮನೆಗೆ ಬಾಗಿಲು ಭೂಷಣವಾಗಿರುತ್ತದೆ. ಈಗೀನ ಕೆಲವು ಅತ್ಯಂತ ಶ್ರೀಮಂತ ಮನೆಗಳಲ್ಲಿ ಅವರು ಒಂದು ಕೈಯಿಂದಲೂ ಕೂಡ ಬಾಗಿಲನ್ನು ಮುಚ್ಚುವ ತೊಂದರೆ ತೆಗೆದುಕೊಳ್ಳುವುದಿಲ್ಲ. ಒಂದು ‘ಸ್ವಿಚ್’ನ್ನು ಒತ್ತಿದರೆ ಸಾಕು ಬಾಗಿಲು ತನ್ನಷ್ಟಕ್ಕೆ ತೆರೆದುಕೊಳ್ಳುತ್ತದೆ. ಈಗ ದೇಶಗಳು ಮತ್ತು ತಂತ್ರಜ್ಙಾನಗಳೂ ಮುಂದುವರಿಯುತ್ತಿರುವಾಗ ಬಾಗಿಲುಗಳಲ್ಲಿಯೂ ಅನೇಕ ರೀತಿಯ ಬದಲಾವಣೆಗಳಾಗುತ್ತಿದೆ. ಈಗ ಪ್ರತಿಯೊಬ್ಬರೂ ಅರಿತಿದ್ದಾರೆ. ಆದರೂ ಅತ್ಯಂತ ಕಡು ಬಡವರು ಮನೆಗೆ ಮರದ ಬಾಗಿಲನ್ನು ಹಾಕಲು ತಾಕತ್ತು ಇಲ್ಲದವರು ತೆಂಗಿನ ಗರಿಗಳಿಂದ ತಯಾರಿಸಿದ ತಟ್ಟಿಯನ್ನು ಮನೆಗೆ ಬಾಗಿಲಾಗಿ ಉಪಯೋಗಿಸುತ್ತಾರೆ. ರಸ್ತೆಯ ಬದಿಯಲ್ಲಿ ವಾಸಿಸುವ ಕೆಲವು ಜನರು ‘ಟೆಂಟ್’ ಗಳಿಂದ ಮನೆಯನ್ನು ನಿರ್ಮಿಸಿ ಅದಕ್ಕೆ ಪ್ಲಾಸ್ಟಿಕ್‌ನಂತಹ ಬಾಗಿಲನ್ನು ಇಳಿದುಬಿಡುತ್ತಾರೆ. ಇದರಿಂದ ನಾವು ಪ್ರತಿಯೊಂದು ಮನೆಗಳಿಗೆ ಬಾಗಿಲು ಇದೆ ಎಂಬುವುದನ್ನು ಅಥೈಯಿಸಿಕೊಳ್ಳಬಹುದು. ಅಲ್ಲದೆ ಬಾಗಿಲನ್ನು ಯಾಕೆ ಉಪಯೋಗಿಸುತ್ತಾರೆ ಎಂಬುವುದನ್ನು ನಾವು ತಿಳಿದುಕೊಳ್ಳಬಹುದು.
ಲೇಖನ :ಶ್ರುತಿ ಯಶ್ವಿನ್, ಕೃಷ್ಣಾಪುರ















