ಮಂಗಳೂರು :ತಂದೆಯೇ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಜಪ್ಪಿನಮೊಗರು ಗ್ರಾಮದ ಕೊಪ್ಪರಿಗೆ ಗುತ್ತು ಎಂಬಲ್ಲಿ ನಡೆದಿದೆ . ಬೆಂಕಿ ಹಚ್ಚಿದ ಆರೋಪಿಯನ್ನು ವಿಶ್ವನಾಥ ಶೆಟ್ಟಿ ಹಾಗೂ ಮಗನನ್ನು ಸ್ವಾಮೀತ್ ಶೆಟ್ಟಿ ( 25 ) ಎಂದು ಗುರುತಿಸಲಾಗಿದೆ.
ಹಸು ಕಟ್ಟುವ ವಿಚಾರದಲ್ಲಿ ತಂದೆ ಮಗನ ನಡುವೆ ಜಗಳ ನಡೆದು ಬಳಿಕ ಅವಾಚ್ಯ ಶಬ್ದಗಳಿಂದ ಬೈದಿರುವ ವಿಶ್ವನಾಥ ಶೆಟ್ಟಿ ಮಗನನ್ನು ಮನೆಯ ಒಳಗೆ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ . ಇನ್ನು ಬೆಂಕಿ ಹಚ್ಚಿರುವುದರಿಂದ ಸ್ವಾಮೀತ್
ಶೆಟ್ಟಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು , ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಪಿ ವಿಶ್ವನಾಥ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ . ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .















