ಮಂಗಳೂರು:ಲಾಕ್‌ಡೌನ್‌ನಿಂದ ಕಂಗೆಟ್ಟ ದ.ಕ ಜಿಲ್ಲೆಯವರಿಗೆ ತುಸು ಖುಷಿ ಕೊಡುವ ಸುದ್ದಿ. ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮಧ್ಯಾಹ್ನ 2 ಗಂಟೆವರೆಗೆ ತೆರೆಯುವುದಕ್ಕೆ ಸರಕಾರ ಅನುಮತಿ ನೀಡಿದೆ.
ಈ ಕುರಿತು ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಬದುಕು ಕಟ್ಟಿಕೊಳ್ಳಲು ಅನೇಕ ವ್ಯಾಪಾರಿಗಳು ಕಷ್ಟ ಪಡುತ್ತಿದ್ದಾರೆ ಆ ಹಿನ್ನೆಲೆಯಲ್ಲಿ ಎಲ್ಲಾ ಅಂಗಡಿಯವರೂ ಜೂನ್ 23 ರಿಂದಲೇ ಮಳಿಗೆ ತೆರೆಯಬಹುದು ಎಂದು
ಹೇಳಿದ್ದಾರೆ.ಆದರೆ ನಮ್ಮಲ್ಲಿ ಪಾಸಿಟಿವಿಟಿ ದರ ಇನ್ನೂ ಕಡಿಮೆಯಾಗಬೇಕು ಎನ್ನುವುದನ್ನು ಸಿಎಂ ತಿಳಿಸಿದ್ದಾರೆ ಹಾಗಾಗಿ ಜನರು ನಾವಿರುವ ಕಠಿಣ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು , ಜನಜಂಗುಳಿ ಆಗದಂತೆ ನೋಡಿಕೊಳ್ಳುವುದು , ಲಸಿಕೆ ಹಾಕಿಸಿಕೊಳ್ಳಲು ಮರೆಯಬಾರದು ಎಂದು ಕೋಟ ತಿಳಿಸಿದ್ದಾರೆ.















