ವಾರ ಭವಿಷ್ಯ 05-07-2021 ರಿಂದ 10-07-2021
ಮೇಷ ರಾಶಿ
ಮನೆಮಂದಿಯಲ್ಲಾ ಸಂಭ್ರಮದಲ್ಲಿದ್ದರೂ ನಿಮಗೆ ದಿನವಿಡೀ ದೇಹಾಲಸ್ಯ ತಲೆದೋರುವುhyದು. ಕೆಲಸಕಾರ್ಯಗಳಲ್ಲಿ ಸ್ವಲ್ಪ ನಿರಾಸಕ್ತಿಯನ್ನು ಕಾಣಬಹುದು. ನಿಮ್ಮ ಕಾರ್ಯಚಟುವಟಿಕೆಗಳನ್ನು ಇತರರು ಆಡಿಕೊಳ್ಳುವ ಸಾಧ್ಯತೆಗಳಿವೆ.
ವೃಷಭರಾಶಿ
ಷೇರುಪೇಟೆ ವ್ಯವಹಾರದಲ್ಲಿ ಹಿನ್ನಡೆ ಇರುತ್ತದೆ, ಆದ್ದರಿಂದ ಅತಿಯಾದ ಬಂಡವಾಳ ಹೂಡಿಕೆ ಬೇಡ. ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಅಭಿವೃದ್ಧಿ ಇರುತ್ತದೆ. ಹೊಸ ಆದಾಯದ ದಾರಿ ಕಾಣಿಸಿ ಮನಸ್ಸಿಗೆ ನೆಮ್ಮದಿ ಇರುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ.
ಮಿಥುನ ರಾಶಿ
ಅತಿಯಾದ ಆತ್ಮಗೌರವ ನಿಮ್ಮನ್ನು ಕಾಡಬಹುದು. ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯ ದೊರೆಯುವ ಲಕ್ಷಣಗಳಿವೆ. ನಿಮ್ಮ ಕಠಿಣ ಮಾತಿನಿಂದ ಕೈಕೆಳಗಿನ ಕೆಲಸಗಾರರು ತಿರುಗಿಬೀಳಬಹುದು. ನಿಮ್ಮ ಗುರಿ ಸಾಧನೆಗಾಗಿ ತಾಳ್ಮೆವಹಿಸುವುದು ಅತಿ ಅಗತ್ಯ. ಹಣದ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ
ಸಿಂಹ ರಾಶಿ
ರಾಜಕಾರಣಿಗಳಿಗೆ ಉತ್ತಮ ದಿನ, ಅವರ ಬಹು ದಿನಗಳ ಆಸೆಯೊಂದು ಈಡೇರುವ ಸಂದರ್ಭ ಇದೆ. ಗೃಹಿಣಿಯರಿಗೆ ಕೆಲಸದ ಒತ್ತಡ ಹೆಚ್ಚಾಗುವುದು. ಪತ್ರಿಕೋದ್ಯಮ ನಡೆಸುವವರ ಮೇಲೆ ಕೆಲವೊಂದು ಇಲಾಖಾ ತನಿಖೆಗಳು ಬರಬಹುದು.
ಕಟಕ ರಾಶಿ
ಸಾಮಾಜಿಕ ಕಾರ್ಯಕ್ರಮಗಳಲ್ಲಿ ಒರಟುತನದಿಂದ ಮಾತನಾಡಿ ಇತರರ ತಿರಸ್ಕಾರಕ್ಕೆ ಗುರಿಯಾಗುವಿರಿ. ಕೌಟುಂಬಿಕ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಕುಟುಂಬದವರನ್ನು ಸೇರಿಸಿ ದೈವಕಾರ್ಯವನ್ನು ನಡೆಸುವ ಬಗ್ಗೆ ಚರ್ಚೆಮಾಡುವಿರಿ
ಕನ್ಯಾ ರಾಶಿ
ನಿಮ್ಮ ಜಾಣ್ಮೆಯಿಂದ ನಿಮ್ಮ ಕುಟುಂಬಕ್ಕೆ ಹೆಚ್ಚು ಅನುಕೂಲವಾಗುವುದು. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಆದಾಯ ಇರುತ್ತದೆ. ವಾಹನ ಚಾಲನೆಯಲ್ಲಿ ಸ್ವಲ್ಪ ಹಣಗಳಿಸಬಹುದು. ವ್ಯವಹಾರಗಳಲ್ಲಿ ಮುಲಾಜಿಗೆ ಒಳಗಾಗದೆ ಕಟ್ಟು ನಿಟ್ಟಿನ ವ್ಯವಹಾರಗಳನ್ನು
ನಡೆಸಿರಿ.
ವೃಶ್ಚಿಕ ರಾಶಿ
ಒಂದು ರೀತಿಯ ಆಲಸ್ಯ ಮನೆಮಾಡಿರುತ್ತದೆ. ಬಂಧುಗಳೊಡನೆ ವ್ಯವಹರಿಸುವಾಗ ನಿಷ್ಕಲ್ಮಶ ಮನಸ್ಸಿನಿಂದ ವ್ಯವಹರಿಸಿರಿ, ಆಗ ಉತ್ತಮ ಬಾಂಧವ್ಯ ಮೂಡುತ್ತದೆ. ಕೃಷಿ ಕೆಲಸಗಳಲ್ಲಿ ಪ್ರಗತಿಯನ್ನು ಕಾಣಬಹುದು. ಯಾವುದೇ ಕೆಲಸಗಳಲ್ಲೂ ಆತುರದ ನಿರ್ಧಾರ ಬೇಡ.
ತುಲಾ ರಾಶಿ
ಬಂಧುಗಳೊಡನೆ ಸಂಬಂಧಗಳನ್ನು ಸುಧಾರಿಸಿಕೊಳ್ಳುವುದು ನಿಮಗೆ ಉತ್ತಮ. ಮಹಿಳೆಯರ ಬಹುದಿನದ ಆಸೆಯೊಂದು ಪೂರೈಸುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಅತಿಯಾದ ಆತ್ಮವಿಶ್ವಾಸದಿಂದ ವ್ಯವಹಾರಗಳಲ್ಲಿ ಹಿನ್ನಡೆಯಾಗಬಹುದು.
ಧನಸ್ಸು ರಾಶಿ
ಸ್ವಯಂ ಉದ್ಯೋಗ ನಡೆಸುತ್ತಿರುವವರಿಗೆ ಸಾಕಷ್ಟು ಅಭಿವೃದ್ಧಿ ಇದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುವುದರಿಂದ ಖರ್ಚನ್ನು ಕಡಿಮೆ ಮಾಡಿ. ಲೇವಾದೇವಿ ವ್ಯವಹಾರ ಖಂಡಿತಾ ಬೇಡವೇ ಬೇಡ. ಬಂಧುಬಾಂಧವರಿಂದ ನಿಮಗೆ ಎಲ್ಲಾ ರೀತಿಯ ಸಹಕಾರ ದೊರೆಯುತ್ತದೆ
ಮಕರ ರಾಶಿ
ಕೃಷಿಕರಿಗೆ ತಮ್ಮ ಸೌಲಭ್ಯದ ಜೊತೆಗೆ ಅನುದಾನ ದೊರೆಯುತ್ತದೆ. ನಿರೀಕ್ಷಿತ ಮಟ್ಟದಲ್ಲಿ ಹಣದ ಹರಿವು ಇರುತ್ತದೆ. ಕೆಲವರಿಗೆ ವ್ಯವಹಾರ ನಿಮಿತ್ತ ದೂರ ಪ್ರಯಾಣದ ಸಾಧ್ಯತೆಗಳಿವೆ. ಸಂಗೀತಗಾರರಿಗೆ ಮಾನ್ಯತೆ ದೊರಕುತ್ತದೆ
ಕುಂಭ ರಾಶಿ
ನಿಮ್ಮ ಯೋಜನೆಗಳನ್ನು ಕೈಬಿಡದೆ ಹಠ ಹಿಡಿದು ಮುನ್ನಡೆಸಿದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಪ್ರಗತಿ ಇರುತ್ತದೆ. ವ್ಯವಹಾರದ ವಿಚಾರದಲ್ಲಿ ಸಾಕಷ್ಟು ಬಾರಿ ಪರಿಶೀಲನೆ ಮಾಡಿ ಮುಂದುವರೆಯಿರಿ
ಮೀನ ರಾಶಿ
ಗಾಜಿನ ಆಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಉತ್ತಮ ಬೇಡಿಕೆ ಬರುತ್ತದೆ. ಸ್ತ್ರೀಯರ ಕೇಶಾಲಂಕಾರ ಮಾಡುವವರಿಗೆ ಉತ್ತಮ ಧನ ಸಂಪಾದನೆ ಇರುತ್ತದೆ. ಲೋಹದ ಎರಕಗಳನ್ನು ತಯಾರು ಮಾಡುವವರಿಗೆ ಬಿಡುವಿಲ್ಲದ ಕೆಲಸ ಇರುತ್ತದೆ.















