ಆನ್‌ಲೈನ್ ವಿವಾಹ ನೋಂದಣಿಗೆ, ಶ್ರೀ ರಾಮ ಸೇನೆ ಕಡೆಯಿಂದ ತೀವ್ರ ವಿರೋಧ

Coastal Bulletin
ಆನ್‌ಲೈನ್ ವಿವಾಹ ನೋಂದಣಿಗೆ, ಶ್ರೀ ರಾಮ ಸೇನೆ ಕಡೆಯಿಂದ ತೀವ್ರ ವಿರೋಧ

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ತದನಂತರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ರಾಜ್ಯ ಬಜೆಟ್ ಮಂಡನೆಯ ವೇಳೆ ಇನ್ನು ಕೆಲವೊಂದು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆನ್ ಲೈನ್ ವಿವಾಹ ನೋಂದಣಿ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಆಧರೆ ಸರ್ಕಾರದ ಈ ನಿರ್ಧಾರಕ್ಕೆ ಇದೀಗ ಶ್ರೀ ರಾಮ ಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ತಂದೆ ತಾಯಿಗೆ ಗೊತ್ತಾಗದೆ ಮುಸ್ಲಿಂ, ಕ್ರಶ್ಚಿಯನ್ ಹಾಗೂ ಹಿಂದೂಗಳು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಸುಲಭವಾಗಿ ಮದುವೆ ಆಗುತ್ತದೆ. ಹೀಗಾಗಿ ಇದರಿಂದ ದೋಖಾ ಆಗುತ್ತದೆ. ನೇರವಾಗಿ ರಿಜಿಸ್ಟಾರ್ ಆಫೀಸ್‌ಗೆ ತೆರಳಿ ನೋಂದಣಿ ಮಾಡುವ ಪದ್ಧತಿಯೇ ಯೋಗ್ಯವಾಗಿದೆ. ಈ ಹಿನ್ನಲೆಯಲ್ಲಿ ಕೂಡಲೇ ಆನ್ ಲೈನ್ ನೋಂದಣಿ ರದ್ದು ಮಾಡಬೇಕು

ಹೊರತು ಜಾರಿ ಮಾಡಬಾರದು ಎಂದು ಶ್ರೀ ರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. 

ಲವ್ ಜಿಹಾದ್ ಪ್ರಕರಣ ಹೆಚ್ಚಾಗುತ್ತಿದ್ದಂತೆ ಈ ಆನ್‌ಲೈನ್ ವಿವಾಹ ನೋಂದಣಿ ಕೂಡ ಸಹಾಯವಾದಂತೆ ಹೀಗಾಗಿ ಇದನ್ನು ಶ್ರೀ ರಾಮ ಸೇನೆ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಇದರ ವಿರುದ್ದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.


Leave a Comment