ಕುದ್ರೋಳಿ ಕಸಾಯಿಖಾನೆಗೆ ಮಹಾನಗರ ಪಾಲಿಕೆಯ ಆರೋಗ್ಯಧಿಕಾರಿಗಳು ಮತ್ತು ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕರು ದಾಳಿ ನಡೆಸಿ ಅಕ್ರಮವಾಗಿ ಕೂಡಿಹಾಕಿದ್ದ ಜಾನುವಾರನ್ನು ವಶಕ್ಕೆ ಪಡೆದು ಗುತ್ತಿಗೆದಾರರು ಮತ್ತು ಕಸಾಯಿಖಾನೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕಿ ದೀಪಿಕಾ ಡಿಸೋಜ ಇಂದು ಬೆಳಗ್ಗೆ 5 ಗಂಟೆಗೆ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಕಸಾಯಿಖಾನೆಯ ಕೊಠಡಿಯಲ್ಲಿ ಮೂರು ವರ್ಷದ ಮೂರು ಕೋಣಗಳನ್ನು ಗುತ್ತಿಗೆದಾರರು ಕೂಡಿಹಾಕಿದ್ದು ಪತ್ತೆಯಾಗಿದೆ.
ಅಪ್ರಾಪ್ತ ಕೋಣಗಳನ್ನು ವಧೆ ಮಾಡುವ ಉದ್ದೇಶದಿಂದ ಕೂಡಿ ಹಾಕಿದ್ದು ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಪಶು
ಸಂಗೋಪನೆ ಇಲಾಖೆಯ ಉಪ ನಿರ್ದೇಶಕರು ಬಂದರು ಠಾಣೆಗೆ ದೂರು ನೀಡಿದ್ದಾರೆ. ವಶಕ್ಕೆ ಪಡೆದ ಕೋಣಗಳನ್ನು ಪಜೀರು ಗೋವನಿತಾಶ್ರಮಕ್ಕೆ ನೀಡಿದ್ದಾರೆ.
ಅಪ್ರಾಪ್ತ ಜಾನುವಾರುಗಳನ್ನು ಕಾನೂನು ಪ್ರಕಾರ ಕಡಿಯಬಾರದು ಎಂದಿದ್ದು ಕಾನೂನು ಉಲ್ಲಂಘಿಸಿ ಮಾಂಸಕ್ಕಾಗಿ ಕಡಿಯುವ ಉದ್ದೇಶದಿಂದ ಕೂಡಿ ಹಾಕಿದ್ದರಿಂದ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆಯಡಿ ಬಂದರು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.















