Coastal Bulletin

ಕೇರಳ:ಕೋಳಿ ಪಾರ್ಮ್ ನಲ್ಲಿ ತೈಲ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿ,ಸಿಬ್ಬಂದಿ ಸೇರಿದಂತೆ 20 ಜನರು ಗಾಯಗೊಂಡ ಘಟನೆ ಕೇರಳದ ಪಲ್ಲಕಾಡ್ ಜಿಲ್ಲೆಯಲ್ಲಿ ನಡೆದಿದೆ.

ಪಾಲಕ್ಕಾಡ್ ನ ತಿರುವಿಳಂಕುನ್ನುನಲ್ಲಿ ನಿನ್ನೆ ಸಂಜೆ 5 ಗಂಟೆಗೆ ಈ ಘಟನೆ ನಡೆದಿದೆ.ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿ “ಎನ್‌ಆರ್‌ಐ ಒಡೆತನದ ಈ

ಕೇಂದ್ರವು ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ತೈಲ ಸೋರಿಕೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅವರು ಅಗ್ನಿಶಾಮಕ ದಳದ ಸಹಾಯವನ್ನು ಕೋರಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಂತೆ,ಆಯಿಲ್ ಟ್ಯಾಂಕ್‌ನಲ್ಲಿ ಎಣ್ಣೆಯನ್ನು ಹೋಲುವ ದ್ರವ ಇದ್ದು ಹೆಚ್ಚಿನ ತಾಪಮಾನದಿಂದಾಗಿ ಸ್ಫೋಟಗೊಂಡಿದೆ ಎಂದು ತಿಳಿಸಿದ್ದಾರೆ.

Leave a Comment