Coastal Bulletin

ಟೋಕಿಯೋ:ಫ್ಲೈವೇಯ್ಟ್​ ಬಾಕ್ಸಿಂಗ್​ ಪಂದ್ಯದಲ್ಲಿ ಸೋಲನುಭವಿಸಿ,ಒಲಿಂಪಿಕ್ಸ್​ನಿಂದ ಹೊರಬಿದ್ದ ವರ್ಲ್ಡ್​ ಚ್ಯಾಂಪಿಯನ್ ಮೇರಿ ಕೋಂ ಅವರು ತಮ್ಮ ಸೋಲಿನ ತೀರ್ಪಿನ ಬಗ್ಗೆ ಅನುಮಾನದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಕೊಲಂಬಿಯಾದ ಇನ್​​ಗ್ರಿಟ್​ ವಾಲೆಂಷಿಯ ವಿರುದ್ಧ ರೌಂಡ್​ ಆಫ್​ 16 ಪಂದ್ಯ ಆಡುವ ಒಂದು ನಿಮಿಷ ಮುಂಚೆ ತಮಗೆ ರಿಂಗ್​ ಡ್ರೆಸ್​ ಬದಲಿಸಲು ಹೇಳಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಒಲಿಂಪಿಕ್ಸ್​ ಮಂಡಳಿಯೊಂದಿಗೆ, ಇಂಡಿಯನ್​ ಒಲಿಂಪಿಕ್ಸ್​ ಕಮಿಟಿ, ಭಾರತದ ಪ್ರಧಾನಿ ಹಾಗೂ ಹಾಲಿ ಮತ್ತು ಮಾಜಿ ಕ್ರೀಡಾ ಸಚಿವರನ್ನು ಟ್ಯಾಗ್​ ಮಾಡಿ ಟ್ವೀಟ್ ಮಾಡಿರುವ ಭಾರತದ ಬಾಕ್ಸರ್​ ಮೇರಿ ಅವರು, “ಆಶ್ಚರ್ಯಕರ.. ರಿಂಗ್​

ಡ್ರೆಸ್​ ಏನಿರಬಹುದು ಎಂದು ಯಾರಾದರೂ ವಿವರಿಸಬಲ್ಲಿರೇ ? ನನ್ನ ಪ್ರೀಕ್ವಾರ್ಟರ್​ ಫೈನಲ್​​ ಪಂದ್ಯದ ಒಂದು ನಿಮಿಷ ಮುನ್ನ ನನಗೆ ನನ್ನ ರಿಂಗ್ ಡ್ರೆಸ್ಸನ್ನು ಬದಲಾಯಿಸಲು ಸೂಚಿಸಲಾಯಿತು. ಯಾರಾದರೂ ವಿವರಿಸಿ” ಎಂದಿದ್ದಾರೆ. 

Leave a Comment