ಅಶ್ಲೀಲ ಚಿತ್ರ ನಿರ್ಮಾಣ ಹಗರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಅಪರಾದ ವಿಭಾಗದ ಪೋಲಿಸರು ಬಂಧಿಸಿದ್ದು ಈಗ ಅವರ ಸಹಚರರಾದ ನಟಿ ಗೆಹನಾ ವಸಿಷ್ಠ ಮತ್ತು ರೋವಾ ಖಾನ್ ಮೇಲೀಗ ಸಂತ್ರಸ್ತ ಯುವತಿ ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ನೀಲಿ ಜಾಲದಲ್ಲಿ ಸಿಲುಕಿರುವ ರಾಜ್ ಕುಂದ್ರಾ ಅಮಾಯಕ-ಮುಗ್ದಯೆಂದು ಮೊದಲಿಂದನೂ ಹೇಳುತ್ತಿದ್ದ ಗೆಹನಾ ವಸಿಷ್ಠ್ ಹಾಗೂ ರೋವಾ ಖಾನ್ ಯುವತಿಯರನ್ನು ಹೇಗೆಲ್ಲಾ ಯಾಮಾರಿಸಿ ದಂಧೆಗೆ ನೂಕುತ್ತಿದ್ದರು ಎಂಬ ಇಂಚಿಂಚೂ ಮಾಹಿತಿಯನ್ನು ಸಂತ್ರಸ್ತ ಯುವತಿ ಪೊಲೀಸರ ಮುಂದೆ ಹಂಚಿಕೊಂಡಿದ್ದಾರೆ.
'ನನ್ನನ್ನು ಗ್ರೀನ್ ಪಾರ್ಕ್ ಬಂಗಲೆಗೆ ಕರೆದುಕೊಂಡ ಹೋದರು. ಅಲ್ಲಿ ನನಗೆ ಅತಿ ಚಿಕ್ಕ ಬಟ್ಟೆಗಳನ್ನು ಹಾಕಿಸಲಾಯಿತು. ಒಂದು ಸ್ಕ್ರಿಪ್ಟ್ ನೀಡಿದರು. ಆ ಪಾತ್ರಕ್ಕೆ 25 ಸಾವಿರ ರೂ. ನೀಡುವುದಾಗಿ ತಿಳಿಸಿದರು. ನಾನು ತುಂಬ ತೆಳ್ಳಗಿದ್ದೇನೆ ಎಂಬ ಕಾರಣಕ್ಕೆ ಸ್ಕ್ರಿಪ್ಟ್ ಬದಲಾಯಿಸಿದರು. ಆ ಸ್ಕ್ರಿಪ್ಟ್ ಓದಿದಾಗ ನನಗೆ ಅಸಹ್ಯ ಎನಿಸಿತು. ಈ ಮಾತ್ರ ನಾನು ಮಾಡುವುದಿಲ್ಲ ಅಂತ ರೋವಾ ಖಾನ್ ಮೇಡಮ್ಗೆ ಹೇಳಿದೆ’ ಎಂದು ಸಂತ್ರಸ್ತ ಯುವತಿಯೊಬ್ಬರು ಕಹಿ ಘಟನೆಯನ್ನು ವಿವರಿಸಿದ್ದಾರೆ.ಈ ಸಿನಿಮಾವನ್ನು ಹೆಚ್ಚು ಜನರು ನೋಡುವುದಿಲ್ಲ. ದುಡ್ಡು ಕೊಟ್ಟು ನೋಡುವವರಿಗೆ ಮಾತ್ರ ಇದು ಲಭ್ಯವಾಗುತ್ತದೆ.
ನಿನ್ನ ಹೆಸರು ಮತ್ತು ಗುರುತನ್ನು ಎಲ್ಲಿಯೂ ಬಹಿರಂಗ ಪಡಿಸುವುದಿಲ್ಲ. ಲುಕ್ ಕೂಡ ಬದಲಾಯಿಸುತ್ತೇನೆ. ದೊಡ್ಡ ಯಶಸ್ಸು ಸಿಗುವುದಕ್ಕಿಂತ ಮುನ್ನ ಎಲ್ಲ ನಟಿಯರು ಇಂಥ ಸಿನಿಮಾಗಳಲ್ಲಿ ಅಭಿನಯಿಸಲೇಬೇಕು’ ಎಂದು ಆ ಯುವತಿಗೆ ರೋವಾ ಖಾನ್ ಹೇಳಿ ಯಾಮಾರಿಸಿದರು. ‘ಶೂಟಿಂಗ್ ಆರಂಭ ಆದಂತೆ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗುತ್ತಾ ಹೋಯಿತು. ಡೈಲಾಗ್ಗಳು ತುಂಬ ಅಸಹ್ಯವಾಗಿದ್ದವು. ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಶೂಟಿಂಗ್ ಮಾಡಲು ಶುರುಮಾಡಿದರು. ಅರ್ಧ ಶೂಟಿಂಗ್ ಆಯಿತು. ಇನ್ನುಳಿದ ದೃಶ್ಯಗಳಲ್ಲಿ ಬೆತ್ತಲೆಯಾಗಿ ನಟಿಸಬೇಕು ಎಂದರು. ಆಗ ನಾನು ಈ ಪ್ರಾಜೆಕ್ಟ್ನಿಂದ ಹೊರನಡೆಯುತ್ತೇನೆ ಎಂದೆ. ಹಾಗಾಗಿದ್ದರೆ ಇಷ್ಟು ದಿನ ಶೂಟಿಂಗ್ಗೆ ಆದ ಖರ್ಚನ್ನು ನೀನೇ ಭರಿಸಬೇಕು ಎಂದು ಬೆದರಿಕೆ ಹಾಕಿದರು. ಸಂಬಳ ಕೊಡುವುದಿಲ್ಲ. ಇನ್ಮುಂದೆ ಎಲ್ಲಿಯೂ ಕೆಲಸ ಸಿಗುವುದಿಲ್ಲ ಅಂತ ಹೆದರಿಸಿದರು’ ಎಂದು ತಮಗಾದ ಮೋಸವನ್ನು ಇಬ್ಬರು ಸಂತ್ರಸ್ತ ಯುವತಿಯರು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.















