ಗಡಿನಾಡ ಕನ್ನಡ ಶಾಲೆಗೆ ಮಲಯಾಳಂ ಶಿಕ್ಷಕರ ನೇಮಕ ಮಾಡಲಾಗಿದ್ದು ಈ ಕುರಿತು ಕರ್ನಾಟಕ ರಾಜ್ಯ ಸರಕಾರ ಬರೆದ ಪತ್ರಕ್ಕೆ ಕೇರಳ ಸರ್ಕಾರ ಗಮನಹರಿಸುತ್ತಿಲ್ಲ. ಈ ರೀತಿಯನ್ನು ವರ್ತನೆಯನ್ನು ನೋಡಿದ ಜನರು ಕೇರಳದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.
ಕಾಸರಗೋಡು ಅಡೂರು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಕನ್ನಡ ಬಾರದ ಮಲಯಾಳಂ ಶಿಕ್ಷಕಿಯ ನೇಮಕ ಮಾಡಿರುವ ಕುರಿತು ಎಲ್ಲರಿಗೂ ವಿರೋಧವಿದೆ. ಮಲಯಾಳಂ ಶಿಕ್ಷಕಿ ನೇಮಕ ಖಂಡಿಸಿ ಪ್ರತಿಭಟಿಸಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಈಗಲೂ ಅದೇ ಅಭಿಪ್ರಾಯ ಹಾಗೂ ಅದೇ ಸಮಸ್ಯೆಯನ್ನು ಹೊಂದಿದ್ದಾರೆ.
ಕೇರಳ ರಾಜ್ಯ ಸರಕಾರದ
ಕ್ರಮ ಖಂಡಿಸಿ ಫೋಷಕರು ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ಮಾಡುತ್ತಿದ್ದಾರೆ. ಕನ್ನಡ ಪಾಠವನ್ನು ಮಾಡುವ ಶಿಕ್ಷಕಿಗೆ ಕನ್ನಡ ಗೊತ್ತಿಲ್ಲದಿದ್ದರೆ ಮಕ್ಕಳಿಗೆ ಯಾವ ರೀತಿ ವಿದ್ಯಾಭ್ಯಾಸ ದೊರಕಬಹುದು, ಮಾತ್ರವಲ್ಲ ಪರೀಕ್ಷೆ ಎದುರಿಸಲು ಕಷ್ಟಸಾಧ್ಯ ಎನ್ನುತ್ತಿದ್ದಾರೆ. ಕೇರಳ ಸರಕಾರದಿಂದ ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚುವ ಹುನ್ನಾರ ಇದು ಎಂದು ಪೋಷಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.















