ಕಳೆದ ಕೆಲವು ದಿನಗಳಿಂದ ವಿದ್ಯುತ್ ಬಿಲ್ ಏರಿಕೆಯಾಗಿರುವ ಬಗ್ಗೆಯೇ ಮಾತುಗಳು ಕೇಳಿ ಬರುತ್ತಿದೆ. ಕಳೆದ ಬಾರಿ ಬಂದ ಬೆಲೆಗಿಂತ ಡಬ್ಬಲ್ ದರ ಬಂದಿದೆ. ವಿದ್ಯುತ್ ಫ್ರೀ ಕೊಡುತ್ತೇವೆ ಎಂದು ಹೇಳಿರುವ ಸರ್ಕಾರ ಹೀಗೆ ಏಕಾಏಕಿ ಏರಿಕೆ ಮಾಡಿದೆ ಎಂದು ತಿಳಿದುಬಂದಿದೆ. ಮೊನ್ನೆ ತಾನೇ ಮಂಗಳೂರಿನಲ್ಲಿ ಒಬ್ಬರ ಮನೆ ಕರೆಂಟ್ ಬಿಲ್ 1.74 ಲಕ್ಷ ತೋರಿಸಿತ್ತು. ಇದೀಗ ಒಬ್ಬ ಅಜ್ಜಿಗೆ ಬರೋಬ್ಬರಿ 1ಲಕ್ಷ ವಿದ್ಯುತ್ ಬಿಲ್ ನೀಡಿರುವ ಘಟನೆಯು ಕೊಪ್ಪಳದ ವೃದ್ಧೆಯ ಮನೆಗೆ ಬಂದಿದೆ.
ಭಾಗ್ಯನಗರದಲ್ಲಿನ ವೃದ್ದೆ ಗಿರಿಜಮ್ಮ ವಾಸವಗಿದ್ದಾರೆ. ಅದು ಸಣ್ನ ಮನೆಯಲ್ಲಿ. ಅಜ್ಜಿ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರು. ಹೀಗಾಗಿ ಮೆಸ್ಕಾಂ ಪ್ರತಿ 70 ರಿಂದ 80ರೂ ಬೀಲ್ ನೀಡುತ್ತಿತ್ತು. ಆದ್ರೆ ಆರು ತಿಂಗಳ ಹಿಂದೆ ವೃದ್ದೆಯ ಮನೆಗೆ
ಮೆಸ್ಕಾಂ ಸಿಬ್ಬಂದಿ ಮೀಡರ್ ಅಳವಡಿಸಿದ್ದು, ಇದೀಗ 6 ತಿಂಗಳಲ್ಲಿ ಅಜ್ಜಿ ಮನೆಗೆ ಬರೊಬ್ಬರಿ 1ಲಕ್ಷ ಬಿಲ್ ಬಂದಿದೆ.
ಜೆಸ್ಕಾಂ ಸಿಬ್ಬಂದಿಗಳ ಯಡವಟ್ಟಿನಿಂದ ಈ ಬಡ ಜೀವ ಪರದಾಡುವಂತಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಈ ಸಮಸ್ಯೆಗೊಂದು ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.















