Coastal Bulletin

ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಡೆಯಾದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನೌಕೆ ಮುಳುಗಡೆಯಾದ 2 ದಿನಗಳ ಬಳಿಕ ಅಂದರೆ ಬುಧವಾರ ಜಲಾಂತರ್ಗಾಮಿ ಶೋಧ ಪ್ರದೇಶದ ಕಡಲಾಳದಲ್ಲಿ ಶಬ್ದವೊಂದು ಕೇಳಿಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಹೀಗಾಗಿ ಸಬ್‌ಮರೀನ್‌ನಲ್ಲಿದ್ದ ಐವರು ಬದುಕುಳಿದಿರುವ ಸಣ್ಣದೊಂದು ಆಶಾಭಾವನೆ ವ್ಯಕ್ತವಾಗಿದೆ. ಸಬ್‌ಮರೀನ್‌ನಲ್ಲಿ ಗರಿಷ್ಠ 96 ಗಂಟೆಗಳಿಗಾಗುವಷ್ಟು ತುರ್ತು ಆಮ್ಲಜನಕ ಇತ್ತು. ಆದರೆ ಈಗ

40 ತಾಸಿನಷ್ಟು ಆಮ್ಲಜನಕ ಮಾತ್ರ ಬಾಕಿ ಇರಬಹುದು. ಶೀಘ್ರವೇ ಪ್ರವಾಸಿ ಸಬ್‌ಮರೀನ್ ಪತ್ತೆಯಾಗದೇ ಹೋದಲ್ಲಿ ಅದರಲ್ಲಿದ್ದವರು ಸಾವನ್ನಪ್ಪುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿಸಿದ್ದಾರೆ. 


Leave a Comment