Coastal Bulletin

ಕಳೆದ 2 ತಿಂಗಳ ಹಿಂದೆ ಹತ್ಯೆಯಾಗಿದ್ದ ಗ್ಯಾಂಗ್ ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ ನ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಮಾತ್ರವಲ್ಲ ಪ್ರಯಾಗ್ ರಾಜ್ ಬಳಿಯ ಲುಕರ್ಗಂಜ್ ಬಳಿ ಸ್ವಾದೀನಪಡಿಸಿಕೊಂಡ 1731 ಚ.ಮೀ ಭೂಮಿಯಲ್ಲಿ ಸಿಎಂ ಆದಿತ್ಯನಾಥ್ 2021 ರ ಡಿಸೆಂಬರ್ 26ರಂದು ವಸತಿಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದರು.

ಇದೀಗ ಅದೇ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2 ಬ್ಲಾಕ್‌ಗಳಲ್ಲಿ 76ಪ್ಲ್ಯಾಟ್ ಗಳನ್ನು ನಿರ್ಮಾಣ ಮಾಡಿ ಬಡವರಿಗೆ ಹಂಚಿದ್ದಾರೆ.  ಈ ತಿಂಗಳ ಆರಂಭದಲ್ಲಿ ಲಾಟರಿ ಮೂಲಕ ಪ್ಲ್ಯಾಟ್ ಗಳನ್ನು ಹಂಚಿಕೆ ಮಾಡಿದ್ದು, ಶುಕ್ರವಾರ ಆದಿತ್ಯನಾಥ್ ಅವರು 76 ಪ್ಲ್ಯಾಟ್ ಗಳ ಕೀಲಿಗಳನ್ನು ಬಡವರಿಗೆ

ಹಂಚಿಕೆ ಮಾಡಿದ್ದಾರೆ. 

ಈ ಪ್ಲ್ಯಾಟ್ ಗಳು 41 ಚ.ಮೀ ವಿಸ್ತೀರ್ಣವನ್ನು ಹೊಂದಿದೆ. ಮನೆಗಳಲ್ಲಿ 2 ಕೊಠಡಿಗಳು, ಅಡುಗೆಮನೆ, ಶೌಚಾಲಯ ಒಳಗೊಂಡಿದೆ. ಈ ಪ್ಲ್ಯಾಟ್ ಗಳಿಗಾಗಿ 6000ಕ್ಕೂ ಹೆಚ್ಚು ಜನರು ಪ್ರಯಾಗ್ ರಾಜ್ ಅಭಿವೃದ್ದಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 1590 ಜನರು ಲಾಟರಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Leave a Comment