ರಾಮನಗರ: ಮೋಜು ಮಸ್ತಿಗಾಗಿ ಬರುವ ಗ್ರಾಹಕರಿಗೆ ಅವರ ಹುಟ್ಟುಹಬ್ಬದ ದಿನದಂದು ಉಚಿತ ಪಾಸ್ ನೀಡುವುದಾಗಿ ವಂಡರ್ ಲಾ ಘೋಷಿಸಿದೆ.
ಈ ಕೊಡುಗೆ ಪಡೆಯಬೇಕಿದ್ದರೆ ನಿಮ್ಮ ಬರ್ತೇಡೇ ಇರುವ ಐದು ದಿನಗಳ ಮುನ್ನ ಅಥವಾ ಐದು ದಿನಗಳ ನಂತರವೂ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಕೊಡುಗೆ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳುವವರಿಗೆ ಮಾತ್ರ ಅನ್ವಯವಾಗಲಿದೆ. ಗ್ರಾಹಕರು ನುಮ್ಮ ಜನ್ಮ ದಿನವನ್ನು ಸೂಚಿಸುವ ಐಡಿ ಕಾರ್ಡ್ನೊಂದಿಗೆ ಬುಕ್ ಮಾಡಬೇಕು.
ನಿಮ್ಮ ಬರ್ತೆಡೇ ಕೇಕ್‌ಕಟ್ಟಿಂಗ್
ಅಥವಾ ವಿಶೇಷವಾಗಿ ಆಚರಿಸಿಕೊಳ್ಳಲು ಸಹ ವಂಡರ್‌ಲಾ ಪಾರ್ಕ್ ನಲ್ಲಿ ಸ್ಥಳದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಈ ಮೂಲಕ ಪ್ರೀತಿಪಾತ್ರರೊಂದಿಗೆ ನಿಮ್ಮ ಜನ್ಮದಿನವನ್ನು ಹಬ್ಬದ ರೀತಿ ಆಚರಿಸಿಕೊಳ್ಳಬಹುದು. ಬರ್ತೇಡೇ ಆಫರ್‌ಗಾಗಿ
https : // ww.wonderla.com/offers/ irthdays & at & wonderla.html ವೆಬ್‌ಸೈಟ್‌ನಲ್ಲಿ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
















