ಬಂಟ್ವಾಳ :ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ವತಿಯಿಂದ ಆಟಿದ ನೆoಪು ಬಗ್ಗೆ ಆಟಿದ ಕೂಟದ ಕಾರ್ಯಕ್ರಮ ಸಾಂಪ್ರದಾಯಿಕ ಶೈಲಿಯಲ್ಲಿ ಬಹಳ ವಿಭಿನ್ನ ರೀತಿಯಿಂದ ರೋಟರಿ ಭವನ ಬಿ ಸಿ ರೋಡ್ ನಲ್ಲಿ ನಡೆಯಿತು.
ಅಧ್ಯಕ್ಷರಾದ ಪಿ ಹೆಚ್ ಎಫ್ ಗಣೇಶ್ ಶೆಟ್ಟಿ ಆಟಿದ ಕೂಟಕ್ಕೆ ಚಾಲನೆ ನೀಡಿದರು. ದೀಪ ಬೆಳಗಿಸಿ ಮಾತನಾಡಿದ ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್ಮನ್ ರೋ ಸತೀಶ್ ಬೋಳಾರ್ ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಜನರು ಪಡುವಂತಹ ಕಷ್ಟ ಬವಣೆಗಳನ್ನು ಸವಿಸ್ತಾರವಾಗಿ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ರೋ ಶೇಷಪ್ಪ ಮಾಸ್ಟರ್ ಹಾಗೂ ಭಾರತೀ ಶೇಷಪ್ಪ ಅಟಿ ತಿಂಗಳ ಕಷ್ಟಗಳನ್ನು ಹಾಗೂ ವಿಶೇಷತೆಗಳನ್ನು ಅತ್ಯಂತ ವಿಶಿಷ್ಟ ರೀತಿಯಿಂದ ವಿಭಿನ್ನ ಶೈಲಿಯಲ್ಲಿ ನಿರೂಪಿಸಿದರು.
ಸ್ಥಾಪಕ ಅಧ್ಯಕ್ಷರಾದ ಎಂಪಿ ಎಚ್ಎಫ್ ಸತೀಶ್
ಕುಮಾರ್ ಕೆ, ಜಿಎಸ್ಆರ್ ಪೀ ಎಚ್ ಎಫ್ ಪದ್ಮನಾಭ ರೈ, ಐಪಿಪಿ ಪಲ್ಲವಿ ಕಾರಂತ್, ಕಾರ್ಯದರ್ಶಿ ಮಧುಸೂಧನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಸದಸ್ಯರು ಬಹಳ ಮುತುವರ್ಜಿ ವಹಿಸಿ ಖಾದ್ಯಗಳನ್ನು ತಮ್ಮ ಮನೆಯಲ್ಲಿ ತಯಾರಿಸಿ ಸಮಾರಂಭದಲ್ಲಿ ಎಲ್ಲರಿಗೂ ಉಣ ಬಡಿಸಿದರು.
ಖ್ಯಾತ ಗಾಯಕರಾದ ಭಾಸ್ಕರ್ ರಾವ್, ಪೃಥ್ವಿರಾಜ್, ಸುಂದರ್ ಬಂಗೇರ ಇವರು ತುಳು ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು.
ಸಾಂಪ್ರದಾಯಿಕ ಶೈಲಿಯ ಆಟಗಳೊಂದಿಗೆ ಕ್ಲಬ್ಬಿನ ಸರ್ವ ಸದಸ್ಯರ ಕುಟುಂಬ ಸಮೇತ ಪಾಲ್ಗೊಳ್ಳುವಿಕೆಯಿಂದ ಈ ಕಾರ್ಯಕ್ರಮ ವಿಭಿನ್ನವಾಗಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.















