ಮಲಯಾಳಂ ಚಿತ್ರರಂಗಕ್ಕೆ ಚಿತ್ರರಂಗದ ಖ್ಯಾತ ನಿರ್ದೇಶಕರಾಗಿ ಗಾಡ್‌ಫಾದರ್, ಕಾಬೂಲಿವಾಲಾ ಸೇರಿದಂತೆ ಅನೇಕ ಗಮನಾರ್ಹ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಸಿದ್ದಿಕಿ ಅವರಿಗೆ ಸೋಮವಾರ ಹೃದಯಾಘಾತ ಆಗಿದೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕೊಚ್ಚಿಯ ಆಸ್ಯತ್ರೆಯಲ್ಲಿ ಸಿದ್ದಿಕಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದಿಕಿ ಅವರಿಗೆ ಹೃದಯಾಘಾತ ಆಗಿರುವ ಸುದ್ದಿ ತಿಳಿದು ಅವರ ಅಭಿಮಾನಿಗಳಿಗೆ ಆತಂಕ ಆಗಿದೆ. ಅವರ ಹೆಲ್ತ್ ಅಪ್‌ಡೇಟ್ ತಿಳಿಯಲು ಎಲ್ಲರೂ ಕಾಐಉತ್ತಿದ್ದಾರೆ. ಸಿದ್ದಿಕಿ ಆದಷ್ಟು ಬೇಗ
ಚೇತರಿಸಿಕೊಳ್ಳಲಿ ಎಂದು ಆಪ್ತರು ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಮೃತಪಟ್ಟ ವಿಚಾರ ಎಲ್ಲರಿಗೂ ನೋವುಂಟು ಮಾಡಿದೆ. ಅದರ ಬೆನ್ನಲ್ಲೇ ನಿರ್ದೇಶಕ ಸಿದ್ದಿಕಿ ಅವರಿಗೂ ಹೃದಯಾಘಾತವಾಗಿರುವುದು ಶಾಕಿಂಗ್ ವಿಚಾರವಾಗಿದೆ.















