ಚಂದ್ರನ ಮೇಲೆ ಲ್ಯಾಂಡರ್ ಇಳಿದ ಸ್ಥಳ ಶಿವಶಕ್ತಿ ಪಾಯಿಂಟ್: ಪ್ರಧಾನಿ ಮೋದಿ

Coastal Bulletin
ಚಂದ್ರನ ಮೇಲೆ ಲ್ಯಾಂಡರ್ ಇಳಿದ ಸ್ಥಳ ಶಿವಶಕ್ತಿ ಪಾಯಿಂಟ್: ಪ್ರಧಾನಿ ಮೋದಿ

ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಂತ ಸ್ಥಳವನ್ನು ಶಿವಶಕ್ತಿ ಎಂಬುದಾಗಿ ಹಾಗೂ ಚಂದ್ರಯಾನ-2 ಪತನಗೊಂಡ ಸ್ಥಳಕ್ಕೆ ತಿರಂಗಾ ಎಂಬುದಾಗಿಯೂ ಕರೆಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದಾರೆ.

ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು 21ನೇ ಶತಮಾನದಲ್ಲಿ ಇದೇ ಭಾರತ, ವಿಶ್ವದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಸಮಾಧಾನ ತರಲಿದೆ. ಲ್ಯಾಂಡಿಂಗ್ ಖಚಿತವಾದ ಬಳಿಕ, ಇಸ್ರೋ ಕೇಂದ್ರ ಹಾಗೂ ಇಡೀ ದೇಶ ಸಂಭ್ರಮ ಪಟ್ಟಿತಲ್ಲ ಈ ಸಮಯವನ್ನು ಯಾರೂ ಮರೆಯುವಂತಿಲ್ಲ. ಆ ಕ್ಷಣ ಇಂದು ಇತಿಹಾಸದಲ್ಲಿ ಅಮರವಾಗಲಿದೆ. ಈ ಕ್ಷಣ ಇಡೀ ಶತಮಾನದ ಪ್ರೇರಣಾದಾಯಿ ಕ್ಷಣಗಳಲ್ಲಿ ಒಂದಾಗಿರಲಿದೆ. ಇಲ್ಲಿಂದ ಸಂದೇಶವನ್ನು ಚಂದ್ರನಿಗೆ ಕಳಿಸುತ್ತಿದ್ದೀರಿ.

ಅಲ್ಲಿಂದ ಸಂದೇಶ ಬರುತ್ತಿದೆ. ಇದೆಲ್ಲವೂ ಸಾಧ್ಯವಾಗಿದ್ದು ನಿಮ್ಮಿಂದ. ನಮ್ಮ ದೇಶದ ವಿಜ್ಞಾನಿಗಳಿಂದ ಇದು ಸಾಧ್ಯವಾಗಿದೆ. ನಾನು ನಿಮ್ಮನ್ನು ಎಷ್ಟು ಶ್ಲಾಘನೆ ಮಾಡಿದರೂ ಅದು ಬಹಳ ಕಡಿಮೆ ಎಂದರು. 

 ಬೆಂಗಳೂರಿನ ಇಸ್ರೋ ಕಮಾಂಡ್ ಸೆಂಟರ್‌ನಲ್ಲಿ ವಿಜ್ಞಾನಿಗಳನ್ನುದ್ದೇಶಿಸಿ ಪ್ರಧಾನಿ ಭಾಷಣ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಇಂದು ಬೆಂಗಳೂರು ವಿಮಾನ ನಿಲ್ದಾಣದ ಹೊರಗೆ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದರು ಮತ್ತು ಇಸ್ರೋ ವಿಜ್ಞಾನಿಗಳ ಭವ್ಯ ಸಾಧನೆಯನ್ನು ಶ್ಲಾಫಿಸಿದರು. 


Leave a Comment