ಕಿಚ್ಚ ಸುದೀಪ್ ವಿರುದ್ಧ ಸುಳ್ಳು ಆರೋಪವನ್ನು ಈಗಾಗಲೇ ಎಂಎನ್ ಕುಮಾರ್ ಮಾಡಿದ್ದಾರೆ, ಇದಕ್ಕೆಲ್ಲ ಮುಖ್ಯ ಕಾರಣ ಸೂರಪ್ಪ ಬಾಬು ಎಂದು ವೀರಕಪುತ್ರ ಶ್ರೀನಿವಾಸ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಮಟ್ಟದ ಖ್ಯಾತಿಯನ್ನು ತಂದುಕೊಟ್ಟ ಖ್ಯಾತನಟನ ವಿರುದ್ಧವಾಗಿ ಇಷ್ಟೆಲ್ಲಾ ನಡೆಯುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಹಾಗಂತ ಸುದೀಪ್ ಅವರು ಪ್ರಶ್ನಾತೀತರಲ್ಲ. ತಪ್ಪು ಮಾಡಿದಾಗ ಅವರನ್ನೂ ಪ್ರಶ್ನಿಸಬೇಕು. ಆದರೆ ಒಂದು ವಾರದಿಂದ ಕೇಳಿಬರುತ್ತಿದ್ದ ಆರೋಪಗಳೆಲ್ಲಾ ಸುಳ್ಳು ಆರೋಪಗಳಾಗಿದೆ ಎಂದರು.
ಸುದೀಪ್ ಅವರ ವಿರುದ್ಧ ಈ ರೀತಿ ಅರೋಪಗಳನ್ನು ಮಾಡುವುದರಲ್ಲಿ ಸೂರಪ್ಪ ಬಾಬು ಕಾರಣ. ಅವರೇ ಪತ್ರಕರ್ತರಿಗೆ ಕರೆಮಾಡಿ ನಾಳೆ
ಸುದೀಪ್ ವಿರುದ್ಧ ಪ್ರೆಸ್ಮೀಟ್ ಇದೆ. ನೀವೆಲ್ಲಾ ನನಗೆ ಸರ್ಪೋಟ್ ಮಾಡಬೇಕು ಎಂದು ಹೇಳಿಕೊಂಡಿದ್ದಾರೆ. ಸುದೀಪ್ ಅವರ ಮಾನಹರಣ ಮಾಡಿದರೆ, ಇವರಿಗೆ ಕಾಲ್‌ಶೀಟ್ ಸಿಗಲ್ಲ ಅನ್ನೋದು ಗೊತ್ತು. ಈ ರೀತಿ ಆರೋಪಗಳನ್ನು ಮಾಡಿದರೆ ಕನ್ನಡ ಜನತೆ ನಂಬಲ್ಲ. ಚಿನ್ನದ ಶುದ್ಧತೆಯನ್ನು ಪರೀಕ್ಷಿಸುವ ಹಾಗೆ , ನಿಮ್ಮ ಆರೋಪಗಳನ್ನೂ ಪರೀಕ್ಷಿಸುತ್ತಾರೆ. ಆಗ ಬಟಾಬಯಲಾಗೋ ಸರದಿಯಲ್ಲಿ ನೀವು ಇರುತೀರಿ ಎಂದಿದ್ದಾರೆ ಶ್ರೀನಿವಾಸ.















