ಈ ಹಿಂದೆ ಚಂದ್ರಯಾನ-2ಉಡಾವಣೆ ಸಂದರ್ಭದಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ವಿಫಲವಾಗಿದ್ದು, ಇದೀಗ ಇಸ್ರೋ ವಿಜ್ಞಾನಿಗಳ ತಂಡವು ನಾಳೆ ಉಡಾವಣೆಯಾಗಲಿರುವ ಚಂದ್ರಯಾನ-3 ರ ಯಶಸ್ಸಿಗೆ ಕಾತುರದಿಂದ ಕಾಯುತ್ತಿದ್ದಾರೆ.
ಚಂದ್ರಯಾನದ ಮಿಷನ್ ರೆಡಿನೆಸ್ ರಿವ್ಯೂ ಪೂರ್ಣಗೊಂಡಿದ್ದು, ಚಂದ್ರಯಾನದ ಉಡಾವಣೆಗೆ ಅನುಮತಿ ಸಿಕ್ಕಿದೆ. ಇಂದಿನಿಂದ ಚಂದ್ರಯಾನಕ್ಕೆ ಕ್ಷಣಗಣನೆ ಆರಂಭವಾಗಲಿದೆ. ಅಂದರೆ ನಾಳೆ ಮಧ್ಯಾಹ್ನ 2.35 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ
ಸಂಸ್ಥೆಯ ನಿರ್ದೇಶಕ ಎಸ್.ಸೋಮನಾಥ್ ಅವರು ಮಾಹಿತಿ ನೀಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಆಗಸ್ಟ್ 23 ರಂದು ಚಂದ್ರನ ಮೇಲೆ ರೋವರ್ ಇಳಿಯಲಿದೆ. ಚಂದ್ರನ ಯಾವಾಗ ಇಳಿಯಬೇಕು ಎಂಬುದನ್ನು ಸೂರ್ಯನ ಬೆಳಕು ಆಧರಿಸಿ ನಿರ್ಧರಿಸಿಲಾಗುತ್ತದೆ. ಇದು ವಿಳಂಬವಾದರೆ, ನಾವು ಮುಂದಿನ ಸೆಪ್ಟೆಂಬರ್ ತಿಂಗಳವರೆಗೆ ಕಾಯಬೇಕು ಎಂದಿದ್ದಾರೆ.















