ನಂದಿನಿ ಹಾಲಿನ ಗುಣಮಟ್ಟ ಕಳಪೆ: ಕೇರಳ ನಿಯೋಗ

Coastal Bulletin
ನಂದಿನಿ ಹಾಲಿನ ಗುಣಮಟ್ಟ ಕಳಪೆ: ಕೇರಳ ನಿಯೋಗ

ಕೇರಳ ಸಚಿವರಾದ ಜೆ.ಚಿಂಚುರಾಣಿಯವರು ಮಾಧ್ಯಮಗಳಲ್ಲಿ ಕರ್ನಾಟದ ನಂದಿನಿ ಹಾಲಿನ ಗುಣಮಟ್ಟ ಕಳಪೆಯಾಗಿದೆ. ಮಾತ್ರವಲ್ಲ ಇದರಿಂದ ಕೇರಳದಲ್ಲಿ ನಂದಿನಿ ಹಾಲನ್ನು ಯಾರು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿಕೆಯನ್ನು ನೀಡಿರುವ ಕಾರಣದಿಂದ ಈ ಹೇಳಿಕೆಗೆ ಸೃಷ್ಟಿಕರಣವನ್ನು ನೀಡಲು ರಾಜ್ಯದಿಂದ ಅಧಿಕಾರಿಗಳ ನಿಯೋಗ ಕಳಿಸಲಾಗುವುದು ಎಂದು ಪಶುಸಂಗೋಪನೆ ಸಚಿವ ಕೆ. ವೆಂಕಡೇಶ್ ತಿಳಿಸಿದ್ದಾರೆ.

ಕರ್ನಾಟಕ ಹಾಲು ಮಹಾಮಂಡಳ ಕಳೆದ 10-12 ವರ್ಷಗಳಿಂದ ಕೇರಳ ಸಹಕಾರ ಸಂಸ್ಥೆ ಮಿಲ್ಮಾರವರಿಗೆ ದಿನವಹಿ ಸರಾಸರಿ ೨ ಲಕ್ಷಲೀಟರ್ ಹಾಲನ್ನು ಸರಬರಾಜು ಮಾಡುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳದಿಂದ ಹಾಲಿನ ಜೊತೆಗೆ ಕೇರಳ ರಾಜ್ಯದಲ್ಲಿ ಪ್ರಥಮವಾಗಿ ನಂದಿನಿ

ಉತ್ಪನ್ನಗಳ ಮಾರಾಟ ಆರಂಭಿಸಿದ್ದರಿಂದ ಕೇರಳ ಸಚಿವರು ಈ ರೀತಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. 

ಸಚಿವ ಜೆ. ಚಿಂಚುರಾಣಿಯವರು ಯಾವುದೇ ಪ್ರಯೋಗಾಲಯದ ವರದಿಯನ್ನು ನೀಡಿಲ್ಲ, ಮಾತ್ರವಲ್ಲ ಕರ್ನಾಟಕದ ನಂದಿನಿ ಹಾಲು ಕಳಪೆ ಎಂಬ ದೂರು ಕೇರಳದಿಂದ ಇಲ್ಲಿಯವರೆಗೆ ಬಂದಿಲ್ಲ ಎಂದು ಹೇಳಿದರು. 


Leave a Comment