ಕಾಸರಗೋಡು ಜಿಲ್ಲೆಯ ಕಿನಾನೂರು-ಕರಿಂತಲಂ ಪಂಚಾಯಿತಿಯ ವಾರ್ಡ್ ನಂ.೮ರ ಮಾಲೂರ್ಕಾಯಂನಲ್ಲಿ ಜುಲೈ ೬ರಂದು ಹಾಗೂ ೭ರಂದು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಬಂದ ನೂರಾರು ಕಾರ್ಮಿಕರಿಗೆ ಅವಧಿ ಮೀರಿದ ಡಾಕ್ಸಿಸೈಕ್ಲಿನ್ ಮಾತ್ರೆಗಳನ್ನು ವಿತರಿಸಲಾಗಿದೆ. ಆದರೆ ಈ ಮಾತ್ರೆಗಳು ಅವಧಿಯು ಮೀರಿದ ಮಾತ್ರೆಗಳಾಗಿವೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಈ ಬಗ್ಗೆ ಜಿಲ್ಲಾ ಆರೋಗ್ಯಧಿಕಾರಿಗಳು ತನಿಖೆಗೆ ಆದೇಶೀಸಿದ್ದಾರೆ.
ಮನರೇಗಾ ಕಾರ್ಮಿಕರಿಗೆ ವಿತರಿಸಲೆಂದು ರೋಗ ನಿರೋಧಕ ಮಾತ್ರೆಗಳನ್ನು ಎಂಎನ್‌ಆರ್‌ಇಜಿಎ ಕಾರ್ಯಕ್ರಮದ ಮುಂಚೂಣಿ ಮೇಲ್ವಿಚಾರಕರು ಜುಲೈ ೬ರಂದು ಔಷಧಾಲಯದಿಂದ ಖರೀದಿಸಿದ್ದರು. ಅಂದು ಸಂಜೆ ಮತ್ತು ಮರುದಿನ ಕೂಲಿ ಕಾರ್ಮಿಕರಿಗೆ ಆ ಮಾತ್ರೆಗಳನ್ನು ಸೇವಿಸಿದ್ದಾರೆ. ಅದೃಷ್ಟವಶಾತ್ ಇದುವರೆಗೆ ಯಾರ ಆರೋಗ್ಯದ
ಮೇಲೆಯೂ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ.
ಈ ವಿಷಯದ ಕುರಿತು ಕಾರ್ಮಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಾಸರಗೋಡು ಡಿಎಂಒ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಉಪ ಡಿಎಂಒ ಡಾ.ಗೀತಾ ಅವರಿಗೆ ವಿಚಾರಣೆಯ ಹೊಣೆ ವಹಿಸಲಾಗಿದೆ.















