ಬಂಟ್ವಾಳ :ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಹಾಗೂ ಲೋಕಸಭಾ ಸದಸ್ಯತ್ವ ಸ್ಥಾನದ ಅನರ್ಹತೆ ಖಂಡಿಸಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಪಕ್ಷ ಪ್ರಮುಖರಾದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಪ್ರಮುಖರಾದ ಅಶ್ವನಿ ಕುಮಾರ್ ರೈ, ಸುದರ್ಶನ ಜೈನ್, ಪದ್ಮಶೇಖರ್ ಜೈನ್, ಲುಕ್ಮಾನ್,ಸುಭಾಶ್ಚಂದ್ರ ಕೊಳ್ನಾಡು,ಚಿತ್ತರಂಜನ್ ಶೆಟ್ಟಿ ಬೊಂಡಾಲ ಮಲ್ಲಿಕಾ ವಿ ಶೆಟ್ಟಿ, ಸದಾಶಿವ
ಬಂಗೇರ, ಐಡಾ ಸುರೇಶ್, ಮಹಮ್ಮದ್ ಶರೀಫ್, ವೆಂಕಪ್ಪ ಪೂಜಾರಿ, ಜೆಸಿಂತ ಡಿ.ಸೋಜ, ಬಿ.ಮೋಹನ್, ಪರಮೇಶ್ವರ ಮೂಲ್ಯ, ಲೋಲಾಕ್ಷ ಶೆಟ್ಟಿ, ಮಹಮ್ಮದ್ ನಂದವಾರ, ಹರ್ಷಾದ್, ರೋಶನ್ ರೈ ಪಚ್ಚಿನಡ್ಕ, ಜೊಸ್ಪಿನ್ ಸುರೇಶ್ ಜೋರಾ, ದಿನೇಶ್ ಶೆಟ್ಟಿ, ಪ್ರಶಾಂತ್ ಕುಲಾಲ್, ಸದಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.















