ಸಿದ್ದಕಟ್ಟೆ: ಜವನೆರೆ ತುಡರ್ ಟ್ರಸ್ಟ್, ಜು 16: ಮಂಥನ 2013 ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ, ರಕ್ತದಾನ ಶಿಬಿರ.

Coastal Bulletin
ಸಿದ್ದಕಟ್ಟೆ: ಜವನೆರೆ ತುಡರ್ ಟ್ರಸ್ಟ್, ಜು 16: ಮಂಥನ 2013 ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ, ರಕ್ತದಾನ ಶಿಬಿರ.

ಬಂಟ್ವಾಳ: ಸಾಮಾಜಿಕ ಸೇವಾ ಸಂಸ್ಥೆ ಸಿದ್ದಕಟ್ಟೆ ಜವನೆರೆ ತುಡರ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ, ರಕ್ತದಾನ ಶಿಬಿರ, ಮತ್ತು ಪ್ರತಿಭಾ ಪುರಸ್ಕಾರ, ತುಡರ್‌ಪುರಸ್ಕಾರ ಕಾರ್ಯಕ್ರಮ ಮಂಥನ 2023 ಜು.16ರಂದು ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಲಿದೆ.

ಬೆಳಗ್ಗೆ 9ಗಂಟೆಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು. ಬಳಿಕ ರಾಷ್ಟ್ರೀಯ ತರಬೇತುದಾರರರಿಂದ ಎಸೆಸೆಲ್ಸಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ನಡೆಯಲಿದೆ. ಇದೇ ವೇಳೆ ರಕ್ತದಾನ

ಶಿಬಿರ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ನಡೆಯಲಿದ್ದು, ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಇದರ ಚಂದ್ರಶೇಖರ ಬಿ.ಸಿ.ರೋಡ್ ಅವರಿಗೆ ತುಡರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜವನೆರೆ ತುಡರ್ ಟ್ರಸ್ಟ್‌ನ ದಿನೇಶ್ ಸುವರ್ಣ ರಾಯಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Comment