ಉಪಹಾರ ಸೇವಿಸುವುದಕ್ಕಾಗಿ ಎಮರ್ಜೆನ್ಸಿ ಸೈರನ್ ಹಾಕಿದ ಅಂಬುಲೆನ್ಸ್ ಚಾಲಕ

Coastal Bulletin
ಉಪಹಾರ ಸೇವಿಸುವುದಕ್ಕಾಗಿ ಎಮರ್ಜೆನ್ಸಿ ಸೈರನ್ ಹಾಕಿದ ಅಂಬುಲೆನ್ಸ್ ಚಾಲಕ

ಅಂಬುಲೆನ್ಸ್ ಚಾಲಕನೊಬ್ಬ ಉಪಹಾರಕ್ಕೆ ತೆರಳಲು ಸೈರನ್ ದುರ್ಬಳಕೆ ಮಾಡಿಕೊಂಡಿರುವ ಘಟನೆಯು ಹೈದರಾಬಾದ್‌ನಲ್ಲಿ ನಡೆದಿದೆ. ಸೈರನ್ ಹಾಕಿಕೊಂಡು ಬರುತ್ತಿದ್ದ ಅಂಬುಲೆನ್ಸ್ ನೋಡಿ ಪೊಲೀಸರು ಎಮೆರ್ಜೆನ್ಸಿ ಎಂದು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಆದರೆ ಆತ ಆಸ್ಪತ್ರೆಗೆ ತೆರಳುವ ಬದಲು ಹೋಟೆಲ್ ಬಳಿ ಗಾಡಿಯನ್ನು ನಿಲ್ಲಿಸಿದ್ದಾನೆ.

ಯಾವುದೇ ಎಮರ್ಜೆನ್ಸಿ ಇಲ್ಲದೆ ಕೇವಲ ಹೋಟೆಲ್‌ಗೆ ಹೋಗಬೇಕಾಗಿದೆ ಸೈರನ್ ಹಾಕಲಾಗಿದೆ ಎಂದು ತಿಳಿದ ಪೊಲೀಸರು ಅಂಬುಲೆನ್ಸ್ ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮಾತ್ರವಲ್ಲ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ

ಬಾರೀ ವೈರಲ್ ಆಗುತ್ತಿದೆ. 

ಟ್ರಾಫಿಕ್ ಕ್ಲಿಯರೆನ್ಸ್ ಪಡೆಯಲು ಮಾತ್ರ ಚಾಲಕ ಎಮರ್ಜೆನ್ಸಿ ಸೈರನ್ ಹಾಕಿದ್ದ, ಹಾಗೂ ಸಂಚಾರ ನಿಯಮ ಉಲ್ಲಂಘನೆಯನ್ನು ಮರೆಮಾಚಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 


Leave a Comment