ಬಸ್‌ನಲ್ಲಿ ತೃತೀಯ ಲಿಂಗಿಯೊಬ್ಬರಿಗೆ ಟಿಕೆಟ್ ನೀಡಲು ಬಸ್ ಕಂಡಕ್ಟರ್ ಗೊಂದಲಕ್ಕೀಡಾದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಶಹಾಪುರ ತಾಲೂಕಿನ ತಡಬಿಡಿ ಗ್ರಾಮದ ತೃತೀಯ ಲಿಂಗಿಯಾದ ಲಕ್ಷ್ಮೀ ಎಂಬವರು ರಾಯಚೂರಿನಿಂದ ಯಾದಗಿರಿ ತೆರಳುತ್ತಿದ್ದ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು.
ಆಧಾರ್‌ಕಾರ್ಡ್ನಲ್ಲಿ ಲಕ್ಷ್ಮಿ
ಎಂಬ ಹೆಸರಿದ್ದು, ಆದರೆ ಲಿಂಗ ಎಂದು ಜಾಗದಲ್ಲಿ ಪುರುಷ ಎಂದು ಉಲ್ಲೇಖಿಸಲಾಗಿತ್ತು. ಇದನ್ನು ಕಂಡ ಕಂಡಕ್ಟರ್ ಗೊಂದಲಕ್ಕೀಡಾದ್ದರು ಎಂದು ತಿಳಿದು ಬಂದಿದೆ.















