ಕೊಲ್ಲೂರು ಸಲಗೇರಿ ಅರಣ್ಯದಲ್ಲಿ ಮಾನಸಿಕ ಅವಸ್ಥೆಯಲ್ಲಿ ತಿರುಗಾಡುತ್ತಿದ್ದ ಕೇರಳ ಮೂಲದ ಅಪರಿಚಿತ ಯುವತಿಯೊಬ್ಬಳನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸ್ಥಳೀಯರು, ರಿಕ್ಷಾ ಚಾಲಕರು ಹಾಗೂ ಪೊಲೀಸರ ಸಹಾಯದಿಂದ ರಕ್ಷಿಸಿ ಆಕೆಯನ್ನು ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್‌ವಸತಿ ಕೇಂದ್ರ ಸ್ನೇಹಾಲಯಕ್ಕೆ ಮಂಗಳವಾರ ದಾಖಲಿಸಲಾಗಿದೆ.
ಯುವತಿಯು ತನ್ನ ಹೆಸರು ಅರ್ಚನಾ (28) ಹಾಗೂ ತನ್ನ ಊರು ಕೇರಳದ ಚರ್ವತ್ಕಲ್ ಎಂಬ ಮಾಹಿತಿಯನ್ನು ನೀಡಿದ್ದಾಳೆ.
ಈಕೆ ಅರಣ್ಯದಲ್ಲಿ ಸುತ್ತಾಡುವುದನ್ನು ಗಮನಿಸಿದ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ಕೊಲ್ಲೂರು ಠಾಣೆಗೆ ಮಾಹಿತಿ ನೀಡಿದರು. ತದನಂತರ
ಕೊಲ್ಲೂರು ಪೊಲೀಸರು ವಿಶು ಶೆಟ್ಟಿ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ವಿಶು ಶೆಟ್ಟಿ, ಪಿಎಸ್‌ಐ ಜಯಶ್ರೀ ಹನ್ನೂರ, ಸುಧಾರಾಣಿ ಟಿ. ಹಾಗೂ ಸಿಬ್ಬಂದಿಗಳಾದ ನವೀನ್ ಮತ್ತು ಪೂರ್ಣಿಮಾ ಜತೆಗಿದ್ದು ಯುವತಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ.















