ಕೇರಳ ಪೊಲೀಸರಿಂದ ವೈಟ್ ಫೀಲ್ಡ್ ಸಿಇಎನ್ ಪೊಲೀಸರ ಟ್ರ‍್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಸಹಿತ ನಾಲ್ವರು ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಎಸಿಪಿ ವರದಿ ಆಧರಿಸಿ ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ಅವರು ಈ ಆದೇಶ ಹೊರಡಿಸಿದ್ದಾರೆ.
ವಂಚನೆ ಪ್ರಕಣದ ಆರೋಪಿಗಳ ಬಂಧನಕ್ಕೆ ತೆರಳಿದ ವೇಳೆ ಲಂಚ ಪಡೆದ ಆರೋಪದಲ್ಲಿ ಕರ್ನಾಟಕದ ನಾಲ್ವರು ಪೊಲೀಸರನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ವರು ಅಧಿಕಾರಿಗಳು ವಂಚನೆ ಪ್ರಕರಣದ ಆರೋಪಿಗಳಿಂದ ಸುಮಾರು 4ಲಕ್ಷ ರೂಪಾಯಿಯನ್ನು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಬೆಂಗಳೂರಿನ ವೈಟ್‌ಪೀಲ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆನ್‌ಲೈನ್ ಕ್ರಿಪ್ಚೋಕರೆನ್ಸಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ್ ಮತ್ತು ನಿಖಿಲ್ ಅನ್ನೊ ಆರೋಪಿಗಳನ್ನ ಬಂಧಿಸಲು ರಾಜ್ಯ
ಪೊಲೀಸರ ತಂಡ ಕೊಚ್ಚಿಗೆ ಬಂದಿತ್ತು. ಈ ವೇಳೆ ಪ್ರಕರಣವನ್ನ ಇತ್ಯರ್ಥಗೊಳಿಸಲು 25 ಲಕ್ಷ ರೂಪಾಯಿಗೆ ಕರ್ನಾಟಕ ಪೊಲೀಸ್ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು.
ಒರ್ವ ಆರೋಪಿಯಿಂದ 1ಲಕ್ಷ ರೂ ಅನ್ನು ಪಡೆದಿದ್ದ ಪೊಲೀಸರು, 3ಲಕ್ಷ ರೂ ನೀಡುವಂತೆ ಬೇಡಿಕೆ ಇಟ್ಟು, ಈ ಹಿನ್ನಲೆ ವಂಚನೆ ಪ್ರಕರಣದ ಆರೋಪಿಗಳ ಕುಟುಂಬದವರು ಕೇರಳ ಪೊಲೀಸರಿಗೆ ದೂರು ನೀಡದ ಹಿನ್ನಲೆ ಕೇರಳ ಪೊಲೀಸರು ಕರ್ನಾಟಕದ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದಾರೆ.
















