ಉಡುಪಿ ಮಲ್ಪೆ ಸಮುದ್ರ ತೀರದಲ್ಲಿ ಅಪರೂಪದ ಪ್ರಾಕೃತಿಕ ವಿದ್ಯಮಾನ ಸಂಭವಿಸಿದೆ. ಕಡಲ ತೀರದ ಉದ್ದಕ್ಕೂ ರಾಶಿ ರಾಶಿ ನಾರು ಬೇರುಗಳು ಬಂದು ಬಿದ್ದಿವೆ. ಸ್ಥಳೀಯ ಆಡು ಭಾಷೆಯಲ್ಲಿ ಈ ವಿಶಿಷ್ಟ ಸಸ್ಯ ಜನ್ಯ ನಾರುಗಳನ್ನು ಗಂಗೆಯ ಕೂದಲು ಎಂದು ಕರೆಯುತ್ತಾರೆ. ಸಮುದ್ರ ತೀರದ ಉದ್ದಕ್ಕೂ ಕಿಲೋ ಮೀಟರ್ ಗಟ್ಟಲೆ ಗಂಗೆಯ ಕೂದಲು ರಾಶಿ ಬಿದ್ದಿದೆ. ಕಡಲ ತೀರದ ಮರಳಿನ ರಾಶಿ ಕಾಣದಷ್ಟು ದಟ್ಟವಾಗಿ ಹಬ್ಬಿಕೊಂಡಿದೆ.
ಹಿಂದೆಯೂ ಇದು ಕಾಣಿಸಿಕೊಂಡಿತ್ತೆ, ಆದರೆ ಈ ಪ್ರಮಾಣದಲ್ಲಿ ಬಂದು ರಾಶಿ ಬದ್ದಿರಲೊಲ್ಲ ಎಂದಿದ್ದಾರೆ ಮೀನುಗಾರರು, ಆದರೆ ಇರು ಉದ್ದ ಲಾಡಿ ಹುಳದಂತಹ ಸಮುದ್ರ ಜೀವಿಗಳ ಹೊರಗಿನ ಪೊರೆ ಎಂದು ತಜ್ಞ ರು ತಿಳಿಸಿದ್ದಾರೆ. ಇದನ್ನು ಸೆಲ್ಲಫೈನ್ ಟ್ಯೂವ್ ವಮ್‌ರ್ ಎಂದು ಕರೆಯುತ್ತಾರೆ. ಸಮುದ್ರ ಮಧ್ಯೆ ಬೆಳೆಯುವ ಜೀವಿಗಳ ಪೊರೆಗಳನ್ನು ಬಿಪೋರ ಜಾಯ್ ಚಂಡಮಾರುತ ದಡಕ್ಕೆ ತಂದು ಎಸೆದಿದೆ ಎಂದು ಮಂಗಳೂರಿನ ಫಿಶರೀಸ್ ಕಾಲೇಜಿನ
ತಜ್ಞರು ತಿಳಿಸಿದ್ದಾರೆ.
ಸಮುದ್ರದ ಆಳದ ಬಂಡೆಗಳ ಮೇಲೆ ಬೆಳೆಯುವ ಈ ಸಸ್ಯ ನಾಶವಾಗಿ ಆಗಾಗ ದಂಡೆಗೆ ತೇಲಿ ಬರುತ್ತಿರುತ್ತದೆ. ಮಲ್ಪೆ ಬೀಚಲ್ಲಿ ಸುಮಾರು ಹತ್ತನ್ನೆರಡು ವರ್ಷಗಳ ಹಿಂದೆ ಕಾಣಿಸಿತ್ತು. ಆದರೆ ಈ ಬಾರಿ ವಿಸ್ಮಯ ಅನ್ನುವಷ್ಟು ಯೆಥೇಚ್ಚವಾಗಿ ದಂಡೆಗೆ ಹರಿದು ಬಂದಿದೆ. ಮಾತ್ರವಲ್ಲ ಸೈಕ್ಲೋನ್ ಪರಿಣಾಮ ಸಮುದ್ರದಲ್ಲಿನ ಸುಂಟರಗಾಳಿ, ಉಬ್ಬರವಿಳಿತದಿಂದ ಹೀಗೆ ದಂಡೆಗೆ ಬಂದು ಬಿದ್ದಿದೆ ಎಂದು ಹೇಳಲಾಗುತ್ತದೆ.















