ಹಾಲುಣಿಸುವ ತಾಯಂದಿರಿಗೆ ಇರಲಿ ಆಹಾರದಲ್ಲಿ ಸಮತೋಲನೆ

Coastal Bulletin
ಹಾಲುಣಿಸುವ ತಾಯಂದಿರಿಗೆ ಇರಲಿ ಆಹಾರದಲ್ಲಿ ಸಮತೋಲನೆ

ಹೆರಿಗೆಯ ನಂತರ ತಾಯಿಯ ಎದೆ ಹಾಲೇ ಮಗುವಿನ ಆಹಾರ. ಹಾಗಾಗಿ ಹಾಲುಣಿಸುವ ತಾಯಂದಿರು ಬಹುಬೇಗನೆ ಕ್ಯಾಲ್ಸಿಯಂ ಕೊರತೆಯ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈರೀತಿಯ ಸಮಸ್ಯೆಗಳಿಂದ ದೂರವಿರಲು ಸರಿಯಾದ ರೀತಿಯ ಆಹಾರ ಸೇವನೆ ಮುಖ್ಯ.

ಗರ್ಬಿಣಿಯಾಗಿರುವಾಗಲೇ ತಾಜಾ ಹಣ್ಣುಗಳನ್ನು ಸೇವಿಸುವುದು ತುಂಬಾ ಮುಖ್ಯ. ಜೀರ್ಣ ಸಂಬಂಧೀ ಸಮಸ್ಯೆಗಳನ್ನು ದೂರಮಾಡಿ ಪೊಟ್ಯಾಷಿಯಂ ಹೆಚ್ಚಿಸುವ ಹಣ್ಣುಗಳನ್ನು ಸೇವಿಸುವುದರಿಂದ ಹೆರಿಗೆಯ ನಂತರದ ರಕ್ತದ ಒತ್ತಡ, ಮಲಬದ್ಧತೆ ಮೊದಲಾದ ಸಮಸ್ಯೆಗಳು ದೂರವಾಗುತ್ತದೆ. 

ದ್ವಿದಳ ಧಾನ್ಯಗಳು, ಗೋಡಂಬಿ ಹಾಗೂ ಬಾದಾಮಿಯನ್ನು ಸೇವಿಸುವುದರಿಂದ ಎದೆಹಾಲು ಹೆಚ್ಚುವುದು ಮಾತ್ರವಲ್ಲ ಇದು ಎದೆಹಾಲಿನ ಮೂಲಕ ಮಕ್ಕಳಿಗೂ ತಲುಪಿ ಅವರ ಮೆದುಳಿನ ಬೆಳವಣಿಗೆ ಚುರುಕುಗೊಳ್ಳಲು

ಸಹಾಯ ಮಾಡುತ್ತದೆ. 

ಮಗುವಿಗೆ ಹಾಲುಣಿಸುವ ಸಮಯದಲ್ಲಿ ತಾಯಂದಿರು ಪಾಲಕ್, ಹರಿವೆ, ಬಸಳೆ ಸೊಪ್ಪು ಹಾಗೂ ತರಕಾರಿಗಳನ್ನು ಅದರಲ್ಲೂ ಕ್ಯಾರೆಟ್, ಟೊಮೆಟೊ ಹಾಗೂ ಕುಂಬಳಕಾಯಿಯನ್ನು ಕಡ್ಡಾಯ ಸೇವಿಸಬೇಕು. 

ಹಾಲು ಮೊಸರನ್ನು ಹೆಚ್ಚಾಗಿ ಸೇವಿಸುವುದರಿಂದ ಕೊಬ್ಬು ಹೆಚ್ಚಾಗುತ್ತದೆ ಎಂಬುದು ಕೆಲವರ ಮಾತು. ಆದರೆ, ಹಾಲು ಮೊಸರನ್ನು ಹಾಲುಣಿಸುವ ತಾಯಂದಿರು ಹೆಚ್ಚಾಗಿ ಸೇವನೆ ಮಾಡಬೇಕು. ಇದರಿಂದ ಮಗುವಿಗೆ ಸರಿಯಾದ ರೀತಿಯಲ್ಲಿ ಎದೆಹಾಲು ಸಿಗುತ್ತದೆ. 


Leave a Comment