ಒರಿಸ್ಸಾ : ವೈದ್ಯೆ ಆಗುವ ಕನಸನು ಹೊತ್ತ ಬಾಲಕಿಯ ರೋಚಕ ಕಥೆ.
ಕೊರೊನಾ ಸೋಂಕು ಸೃಷ್ಟಿಸಿರುವ ಸಂಕಷ್ಟವು ಹಲವರ ಜೀವನದ ಸ್ಥಿತಿಯನ್ನೇ ಬದಲು ಮಾಡಿಬಿಟ್ಟಿದೆ. ಏನೇನೋ ಕನಸುಗಳನ್ನು ಕಟ್ಟಿರುವ ಹಲವರ ಕನಸಿನಸೌಧವು ಭಗ್ನಾವಶೇಷವಾಗಿದೆ. ಅದಕ್ಕೊಂದು ಸಮರ್ಥ ನಿದರ್ಶನ ಒಡಿಶಾದ ಭಾನುಪ್ರಿಯಾ(18) ಎಂಬ ಯುವತಿಯ ಜೀವನ. ವೈದ್ಯೆಯಾಗುವ ಈಕೆಯ ಕನಸಿಗೆ ಕೊರೊನಾ ಲಾಕ್ ಡೌನ್‌ನ ಸಂಕಷ್ಟ ಅಡ್ಡಗಾಲಿಟ್ಟಿದೆ. ಕನಸಾಗಿಯೇ ಉಳಿದಿದೆ.ಪಿಯುಸಿ ವಿದ್ಯಾರ್ಥಿನಿಯಾಗಿರುವ ಭಾನುಪ್ರಿಯಾ, ವೈದ್ಯೆಯಾಗಬೇಕೆಂಬ ಕನಸು ಕಟ್ಟಿಕೊಂಡವಳು. ಆದರೆ, ಕೊರೊನಾ ಲಾಕ್‌ಡೌನ್
ಆಕೆಯ ಕನಸಿಗೆ ಅಡ್ಡಿಯಾಗಿದೆ. ಚಾಲಕನಾಗಿ ನೌಕರಿ ಮಾಡುತ್ತಿದ್ದ ಆಕೆಯ ತಂದೆಯ ಕೆಲಸವನ್ನು ಲಾಕ್‌ಡೌನ್ ಕಸಿದುಕೊಂಡಿತು. ಉಳಿತಾಯ ಹಣ ಖಾಲಿಯಾಗುತ್ತಿದ್ದಂತೆ ಮುಂದಿನ ಜೀವನವೇ ಕುಟುಂಬಕ್ಕೆ ಕಷ್ಟವಾಗಿತ್ತು. ಒಂದು ಹೊತ್ತಿನ ಊಟಕ್ಕೂ ತತ್ವಾರವಾಯಿತು. ಇತ್ತ ತಂದೆಯ ಅಸಹಾಯಕತೆಯನ್ನು ನೋಡಿದ ಭಾನುಪ್ರಿಯಾ ತನ್ನ ವಿದ್ಯಾಭ್ಯಾಸವನ್ನು ಸ್ವಲ್ಪಕಾಲ ಪಕ್ಕಕ್ಕಿಟ್ಟು ಏನಾದರೂ ಮಾಡಬೇಕೆಂಬ ನಿರ್ಧಾರಕ್ಕೆ ಬಂದಳು. ಮೂವರು ಮಕ್ಕಳಲ್ಲಿ ಭಾನುಪ್ರಿಯಾಳೇ ಹಿರಿಯವಳು.















