ಒಂದು ಗಾದೆಮಾತೆ ಇದೆ. ಮನುಷ್ಯರನ್ನು ನಂಬುದಕ್ಕಿಂತ ಬೀದಿನಾಯಿಯನ್ನು ಆದರೂ ನಂಬಬಹುದು. ಆದು ಎಂದಿಗೂ ಮೋಸ ಮಾಡುವುದಿಲ್ಲ ಎಂದು. ಪ್ರಾಮಾಣಿಕತೆಗೆ ಇನ್ನೊಂದು ರೂಪನೇ ನಾಯಿ ಎಂದರೆ ತಪ್ಪಗಲಾರದು. ಮನೆಯ ಮಾಲೀಕ ಎಲ್ಲಾದರೂ ಹೋದರೆ ಸಾಕು, ಮನೆಗೆ ತಲುಪುವ ವರೆಗೆ ದಾರಿಯನ್ನೇ ಕಾಯುತ್ತ ಕುಳಿತಿರುತ್ತವೆ. ನಾಯಿಯ ಪ್ರಾಮಾಣಿಕತೆಯ ಒಂದು ಕಥೆ ಆಂಧ್ರಪ್ರದೇಶದ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯಲ್ಲಿ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಾಲೀಕನಿಗಾಗಿ ಕಾಯುತ್ತ, ತನ್ನ ಮಾಲೀಕರ ಪಾದರಕ್ಷೆ ಬಳಿ ನಿಂತಿರುವ ಹೃದಯವಿದ್ರಾಯಕ ದೃಶ್ಯಗಳು ಸಾಮಾಜಿಕ ಮಾಧ್ಯದಲ್ಲಿ ಆಗಿವೆ.
ಯಾನಂ ಫೆರಿಂ ರಸ್ತೆ ನಿವಾಸಿ ಮಂಡಂಗಿ ಕಾಂಚನಾ (22) ಎಂಬ ಮಹಿಳೆಯೊಬ್ಬರು ನಾಯಿಯೊಂದಿಗೆ ಯಾನಂ ಮತ್ತು ಯದುರ್ಲಂಕಾ ನಡುವಿನ ಜಿಎಂಸಿ ಬಾಲಯೋಗಿ ಸೇತುವೆಯಲ್ಲಿ ನಡೆದುಕೊಂಡು ಹೋಗುತ್ತೀರುವಾಗ ಇದ್ದಕ್ಕಿದ್ದಂತೆ ನದಿಗೆ ಹಾರಿದ್ದಾರೆ. ದಾರಿಹೋಕರು ಈ ಬಗ್ಗೆ ಮಾಹಿತಿ ನೀಡಿದ ನಂತರ,
ದೋಣಿಯಲ್ಲಿದ್ದ ಮೀನುಗಾರರು ಆಕೆಯನ್ನು ಉಳಿಸಲು ಪ್ರಯತ್ನಿಸಿದರು. ಆದರೆ ಬಲವಾದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಮಾಲೀಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಯದ ಸಾಕುನಾಯಿ ಆಕೆಯ ಚಪ್ಪಲಿಯ ಬಳಿ ಕಾಯುತ್ತಲೇ ಇತ್ತು.
ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಯಾನಂ ಪೊಲೀಸರು ತಿಳಿಸಿದ್ದಾರೆ.















