ಮರವಂತೆ ಬೀಚ್‌ನಲ್ಲಿ ಸಮುದ್ರಪಾಲದ ಯುವಕ

Coastal Bulletin
ಮರವಂತೆ ಬೀಚ್‌ನಲ್ಲಿ ಸಮುದ್ರಪಾಲದ ಯುವಕ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿ ಮರವಂತೆ ಬೀಚ್‌ಗೆ ಗದಗ ಮೂಲದ ಮೂವರು ಯುವಕರು ನಿನ್ನೆ ಮಧ್ಯಾಹ್ನ ವೇಳೆ ಈಜಲು ಇಳಿದಿದ್ದು. ಈ ಸಂದರ್ಭದಲ್ಲಿ ಅಲೆಯ ಅಬ್ಬರಕ್ಕೆ ಒರ್ವ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ.

ತಕ್ಷಣವೇ ಸ್ಥಳೀಯ ಅಂಬುಲೆನ್ಸ್ ಡೈವರ್ ಸಮಾಜಸೇವಕ ಇಬ್ರಾಹೀಂ ಗಂಗೊಳ್ಳಿ ಹಾಗೂ ತಂಡ, ಜೀವ ರಕ್ಷಕ ಈಜುತಜ್ಞ ದಿನೇಶ್ ಖಾರ್ವಿ ಹಾಗೂ ತಂಡ ಮತ್ತು ಅಗ್ನಿಶಾಮಕ ದಳ ಮತ್ತು ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು, ಹಾಗೂ ಗಂಗೊಳ್ಳಿ ಪೊಲೀಸರು

ಹುಡುಕಾಟ ಕಾರ್ಯಚರಣೆ ನಡೆಸಿದ್ದಾರೆ. 

ಗದಗ ಜಿಲ್ಲೆಯ ಮುಂಡ್ರಂಗಿ ತಾಲೂಕು ಮೇವಂಡಿ ಗ್ರಾಮದ ನಿವಾಸಿ ಪೀರ್ ನದಾಫ್ ನೀರುಪಾಲಾದ ಯುವಕ ಎಂದು ಗುರುತಿಸಲಾಗಿದೆ. 

ಸಮುದ್ರಪಾಲದ ಯುವಕನ ಮೃತದೇಹ ಇನ್ನು ಪತ್ತೆಯಾಗಿಲ್ಲ. ಇದೀಗ ಶೋಧ ಕಾರ್ಯ ಮುಂದವರೆದಿದೆ ಎಂದು ಮೂಲಗಳು ತಿಳಿಸಿದೆ. 


Leave a Comment