ಸಿಂಹದ ಕಣ್ಣೀಂದ ಮರಿಗಳನ್ನು ರಕ್ಷಿಸಿದ ಆನೆಗಳು

Coastal Bulletin
ಸಿಂಹದ ಕಣ್ಣೀಂದ ಮರಿಗಳನ್ನು ರಕ್ಷಿಸಿದ ಆನೆಗಳು

ತಾಯಿ ಪ್ರೀತಿಯನ್ನು ಎಂದಿಗೂ ಬಣ್ಣಿಸಲಾಗದ ಪ್ರೀತಿ. ಆ ಪ್ರೀತಿಯಲ್ಲಿ ಯಾವುದೇ ಸ್ವಾರ್ಥವಿಲ್ಲ. ಅದು ನಿಸ್ವಾರ್ಥ ಪ್ರೀತಿ. ತಾಯಿಯೊಬ್ಬಳೇ ಅಲ್ಲ ತಂದೆಯೂ ಸಹ ಮಕ್ಕಳನ್ನು ಪ್ರೀತಿಸುವುದರಲ್ಲಿ ಕೊರತೆ ಕಾಣದು. ತಂದೆತಾಯಿ ಇಬ್ಬರು ಸಹ ಮಕ್ಕಳಿಗೆ ಏನೇ ಕಷ್ಟಬಂದರೂ ಎದುರು ನಿಲ್ಲಲು ಎಂದಿಗೂ ಹಿಂಜರಿಯುವುದಿಲ್ಲ. ಅದೇ ಕಾಳಜಿ, ದೈರ್ಯವನ್ನು ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಸಹ ನೋಡಬಹುದು. ಅಂತಹದೇ ಒಂದು ಘಟನೆ ಇಲ್ಲಿದೆ.

ಆನೆಗಳು ತಮ್ಮ ಬಳಗವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತವೆ. ಹಿಂಡಿನಲ್ಲಿರುವ ದೊಡ್ಡ ಆನೆಗಳು ಕಿರಿಯ ಆನೆಗಳ ಕಾಳಜಿ ವಹಿಸುತ್ತದೆ, ಮಾತ್ರವಲ್ಲ ಕಷ್ಟದ ಸಮಯದಲ್ಲಿ ನೆರವಿಗೂ ಬರುತ್ತದೆ. ಆದರಲ್ಲೂ ಮರಿ ಆನೆಗಳು ಸಂಕಷ್ಟದಲ್ಲಿ ಸಿಲುಕಿಕೊಂಡರೆ, ಒಗ್ಗಟ್ಟಾಗಿ ನಿಂತು ರಕ್ಷಿಸಲು ಬರುತ್ತದೆ. ಈಗ ಆದಂತೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. 

ಕಾಡಿನಲ್ಲಿ ಸಿಂಹವನ್ನು ಕಂಡ ಆನೆಗಳ ಹಿಂಡು ಅದಕ್ಕೆ ಪ್ರತಿಕ್ರಿಯಿಸುವ ಪರಿಯ ದೃಶ್ಯವನ್ನು ಭಾರತೀಯ

ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕಾಡಿನಲ್ಲಿರುವ ಆನೆಗಳ ಹಿಂಡಿನ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ವೇಳೆ ಆ ಆನೆಗಳು ಸಿಂಹವೊಂದನ್ನು ನೋಡುತ್ತದೆ. ಇದಾದ ತಕ್ಷಣ ಇವುಗಳು ತಮ್ಮ ಬಳಗದಲ್ಲಿರುವ ಮರಿ ಆನೆಗಳ ರಕ್ಷಣೆಗೆ ಮುಂದಾಗುತ್ತದೆ. ಎಲ್ಲಾ ಮರಿಗಳನ್ನು ನಡುವಿನಲ್ಲಿ ನಿಲ್ಲಿಸಿ ಸುತ್ತಲೂ ಭದ್ರಕೋಟೆಯನ್ನು ನಿರ್ಮಿಸುವ ಆನೆಗಳ ಒಗ್ಗಟ್ಟು ನೋಡಿದ್ರೆ ಆಶ್ಚರ್ಯವಾಗುತ್ತದೆ. 


Leave a Comment