ಉಡುಪಿಯಲ್ಲಿ ಕಂಡುಬಂದ ಅಪರೂಪದ ಸ್ಪಾಟೆಡ್ ಮೊರೈ ಈಲ್ಸ್ ಮೀನು

Coastal Bulletin
ಉಡುಪಿಯಲ್ಲಿ ಕಂಡುಬಂದ ಅಪರೂಪದ ಸ್ಪಾಟೆಡ್ ಮೊರೈ ಈಲ್ಸ್ ಮೀನು

ಉಡುಪಿ ಸುರತ್ಕಲ್ ಬೀಚ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಸ್ಪಾಟೆಡ್ ಮೊರೈ ಈಲ್ಸ್ ಮೀನು ಪತ್ತೆಯಾಗಿದೆ. ಈ ಮೀನಿನ ವೈಜ್ಞಾನಿಕ ಹೆಸರು ಜಿಮ್ನೋಥೋರಾಕ್ಸ್ ಮೊರಿಂಗಾ ಎಂಬುದಾಗಿದೆ. ಮಾತ್ರವಲ್ಲ ಇದನ್ನು ಸ್ಥಳೀಯವಾಗಿ ಆರೋಳಿ ಮೀನು ಎಂಬುದಾಗಿ ಹಾಗೂ ತುಳುವಿನಲ್ಲಿ ಮರಂಚಾ ಮೀನು ಎಂದು ಸಹ ಕರೆಯತ್ತಾರೆ.

ಒಂದು ರೀತಿಯಲ್ಲಿ ಹೇಳುವುದಾದರೆ ಕನ್ನಡಿ ಹಾವಿನಂತೆ ಕಪ್ಪು ಚುಕ್ಕೆಗಳನ್ನು ಇದು ಒಳಗೊಂಡಿದೆ. ಆದರೆ ಈ ಜಾತಿಯ ಮೀನುಗಳು ಹೆಚ್ಚಾಗಿ ಕೆಂಪು ಬಣ್ಣದಿಂದ ಕೂಡಿರುತ್ತದೆ. ಆದರೆ ಈ ಮೀನು ಮಾತ್ರ ಅಪರೂಪದ ಮೀನಾಗಿ ಕಂಡುಬಂದಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. 

ಈ ಮೀನು ದ್ವೀಪದ

ಬಳಿ ಇರುವ ಹವಳ ದಿಬ್ಬದಂತಹ ಸ್ಥಳಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತದೆ. ಬಹುಶಃ ಈ ಮೀನು ಕಡಲಿನ ಅಲೆಗಳ ಅಬ್ಬರದಿಂದ ತೀರಕ್ಕೆ ಬಂದಿರಬಹುದು ಎಂದು ಮಂಗಳೂರು ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಮಂಗಳೂರು ಪ್ರಾದೇಶೀಕ ಕೇಂದ್ರ ವಿಜ್ಞಾನಿ ರಾಜೇಶ್ ಕೆ.ಎಂ ತಿಳಿಸಿದ್ದಾರೆ.  


Leave a Comment