ಕಾಸರಗೋಡು: 5ದಿನಗಳ ಕಾಲ ಬಿರುಸಿನ ಮಳೆ ಸಾಧ್ಯತೆ: ಹಳದಿ ಅಲರ್ಟ್ ಘೋಷಣೆ

Coastal Bulletin
ಕಾಸರಗೋಡು: 5ದಿನಗಳ ಕಾಲ ಬಿರುಸಿನ ಮಳೆ ಸಾಧ್ಯತೆ: ಹಳದಿ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಮುಂಗಾರು ಮಳೆಗಾಗಿ ಕಾಯುತ್ತಿದ್ದ ಸಮಯದಲ್ಲಿ, ವರುಣನ ಆಗಮನದಲ್ಲಿ ಕೊಂಚ ತಡವಾಗಿತ್ತು. ಆದರೆ ಕಳೆದ ವಾರದಿಂದ ಸತತವಾಗಿ ಸುರಿದ ಮಳೆಗೆ ನೆರೆ ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ. ಮಳೆಯ ಆಗಮನದಿಂದ ರೈತರು ಸಂತಸಗೊಂಡಿದ್ದು, ಕೆಲವೊಂದು ಕಡೆ ಮಳೆಯಿಂದಾಗಿ ಜನರ ಜೀವನ ಅಸ್ಥವ್ಯಸ್ಥವಾಗಿದೆ.

ಇನ್ನು ಕಾಸರಗೋಡು ಜಿಲ್ಲೆಯಲ್ಲಿ 5 ದಿನ ಅಂದರೆ ಜುಲೈ 14ರವರೆಗೆ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದ್ದು. ಮಾತ್ರವಲ್ಲ ಕಾಸರಗೋಡು

ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ.

ಬಿರುಸಿನ ಮಳೆ ಇರುವ ಕಾರಣ ಸಾರ್ವಜನಿಕರು ಮತ್ತು ಮೀನುಗಾರಿಕೆ ಸಮುದ್ರಕ್ಕೆ ತೆರಳುವವರು ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ. 


Leave a Comment