ಈ ಸ್ಮಾರ್ಟ್ ಫೋನ್ ಅಂಗಡಿಯಲ್ಲಿ 2 ಕೆಜಿ ಟೊಮೆಟೊ ಫ್ರೀ: ಏನಿದು ಗುಟ್ಟು ತಿಳಿಯೋಣ ಬನ್ನಿ

Coastal Bulletin
ಈ ಸ್ಮಾರ್ಟ್ ಫೋನ್ ಅಂಗಡಿಯಲ್ಲಿ 2 ಕೆಜಿ ಟೊಮೆಟೊ ಫ್ರೀ: ಏನಿದು ಗುಟ್ಟು ತಿಳಿಯೋಣ ಬನ್ನಿ

ಇಲ್ಲೊಂದು ವಿಶೇಷವಾದ ಅಂಗಡಿಯಿದೆ. ಇಲ್ಲಿ ಪ್ರತಿಯೊಬ್ಬರಿಗೆ 2ಕೆಜಿ ಟೊಮೆಟೊ ಫ್ರೀಯಾಗಿ ನೀಡಲಾಗುತ್ತಿದೆ. ಇದೀಗ ಈ ಸ್ಮಾರ್ಟ್ ಫೋನ್ ಅಂಗಡಿಯಲ್ಲಿ ಜನವೋ ಜನ. ನಿಮಗೂ ಉಚಿತವಾಗಿ 2 ಕೆಜಿ ಟೊಮೆಟೊ ಬೇಕು ಎಂದರೆ ಆ ಸ್ಮಾರ್ಟ್ ಫೋನ್ ಶಾಪ್‌ಗೆ ಭೇಟಿ ನೀಡಿ. ಆದರೆ, ಇಲ್ಲೊಂದು ಕಂಡೀಷನ್ ಜಾರಿಯಲ್ಲಿದೆ ಏನೆಂದರೆ?

ಈ ಸ್ಮಾರ್ಟ್ ಫೋನ್ ಶಾಪ್‌ನಲ್ಲಿ ಮೊಬೈಲ್ ಫೋನ್ ಖರೀದಿಸುವ ಗ್ರಾಹಕರಿಗೆ ಉಚಿತವಾಗಿ ೨ಕೆಜಿ ಟೊಮೆಟೊ ನೀಡಲಾಗುತ್ತಿದೆ. ಈ ಆಫರ್ ನೀಡಿರುವುದು ಮಧ್ಯಪ್ರದೇಶದ ಅಶೋಕನಗರದ ಸ್ಮಾರ್ಟ್ ಫೋನ್ ಶಾಫ್ ನಲಿ.್ಲ 

ಟೊಮೆಟೊ ಬೆಲೆ ದುಬಾರಿಯಾಘಿರುವ ಮೊಬೈಲ್ ಫೋನ್ ವ್ಯಾಪಾರ ಹೆಚ್ಚಿಸಲು ಸ್ಮಾರ್ಟ್ ಫೋನ್ ಶಾಫ್ ಮಾಲೀಕ ಅಭಿಷೇಕ್ ಅಗರ್ವಾಲ್ ಹೊಸ ಆಫರ್ ಜಾರಿ ಮಾಡಿದ್ದಾರೆ. ಮೊಬೈಲ್ ಫೋನ್, ಇಯರ್ ಫೋನ್, ಇಯರ್ ಬರ್ಡ್ಸ್, ಜಾರ್ಜರ್ ಸೇರಿದಂತೆ ಯಾವುದೇ ವಸ್ತುಗಳನ್ನು ಈ ಸ್ಮಾರ್ಟ್ ಫೋನ್ ಶಾಪ್‌ನಲ್ಲಿ ಖರೀದಿಸಿದರೆ ಟೊಮೆಟೊ ಉಚಿತವಾಗಿ ನೀಡಲಾಗುತ್ತಿದೆ.

ಈ ಆಫರ್ ಪರಿಣಾಮ ಅಭಿಷೇಕ್ ಅಗರ್ವಾಲ್ ಶಾಪ್‌ಗೆ ಭಾರಿ ಗ್ರಾಹಕರು ಆಗಮಿಸುತ್ತಿದ್ದಾರೆ. ಹಲವರು ಟೊಮೆಟೊಗಾಗಿ ಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುತ್ತಿದ್ದಾರೆ. 

ಟೊಮೆಟೊ ಬೆಲೆ ದುಬಾರಿಯಾಗಿದೆ. ಇತ್ತ ಮೊಬೈಲ್ ಮಾರುಕಟ್ಟೆಯಲ್ಲೂ ಭಾರೀ ಪೈಪೋಟಿ ಇದೆ, ಹೀಗಾಗಿ ಇದೇ ಸಂಧರ್ಭವನ್ನು ಬಳಸಿ ನಾವು ಗ್ರಾಹಕರಿಗೆ ಆಫರ್ ನೀಡಿದ್ದೇವೆ. ಇದೀಗ ಜನರು ಟೊಮೆಟೊ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಾವು ಸ್ಮಾರ್ಟ್ ಫೋನ್ ಖರೀದಿಸುವ ಗ್ರಾಹಕರಿಗೆ ೨ಕೆಜಿ ಟೊಮೆಟೊ ಉಚಿತವಾಗಿ ನೀಡುವ ಆಫರ್ ಘೋಷಿಸಲಾಯಿತು ಎಂದು ಅಭಿಷೇಖ್ ಅಗರ್ವಾಲ್ ಹೇಳಿದ್ದಾರೆ. 


Leave a Comment