Coastal Bulletin

ಲಂಡನ್: ಉದ್ಯಮಿ ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಲಂಡನ್‌ ನ್ಯಾಯಾಲಯ ಸೋಮವಾರ ಘೋಷಿಸಿದೆ. ಈ ಘೋಷಣೆಯಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕುಗಳ ಒಕ್ಕೂಟವು ವಿಶ್ವದಾದ್ಯಂತ ಇರುವ ಮಲ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಾದಿ ಸುಗಮವಾಗಿದೆ.ಭಾರತದಲ್ಲಿ 9,000 ಕೋಟಿ ರೂ.ಗಳ ಸಾಲ ವಂಚನೆ ಮಾಡಿದ ವಿಜಯ ಮಲ್ಯ ವಿದೇಶಕ್ಕೆ ಪರಾರಿಯಾಗಿದ್ದರು.

“15.42 (ಯುಕೆ ಸಮಯ) ದಂತೆ, ನಾನು ವಿಜಯ್‌ ಮಲ್ಯ ಅವರನ್ನು ದಿವಾಳಿಯೆಂದು ತೀರ್ಪು ನೀಡುತ್ತೇನೆ” ಎಂದು ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ಲಂಡನ್ ಹೈಕೋರ್ಟ್‌ನ ಚಾನ್ಸರಿ ವಿಭಾಗದ ಆನ್‌ಲೈನ್‌ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾರೆ.

‘‘ವಿಜಯ್‌ ಮಲ್ಯ ತಾನು ಪಡೆದ ಸಾಲವನ್ನು ಬ್ಯಾಂಕ್‌ಗಳ ಒಕ್ಕೂಟಕ್ಕೆ ಪೂರ್ತಿಯಾಗಿ, ನಿಗದಿತ ಅವಧಿಯೊಳಗೆ ಹಿಂದಿರುಗಿಸುತ್ತಾರೆ ಎಂದು ಹೇಳಲು ಸಾಕಷ್ಟು ಆಧಾರಗಳಿಲ್ಲ” ಎಂದು ನ್ಯಾಯಾಧೀಶರು ತನ್ನ ಆದೇಶದಲ್ಲಿ

ಹೇಳಿದ್ದಾರೆ.

‘ದಿವಾಳಿ’ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಲು ಅವಕಾಶ ಕೊಡಬೇಕು ಎಂದು ಮಲ್ಯ ಪರ ವಕೀಲರು ಅರ್ಜಿ ಸಲ್ಲಿಸಿದರು. ಆದರೆ, ಈ ಮೇಲ್ಮನವಿಯು ಯಶಸ್ಸು ಕಾಣುವ ಸಾಧ್ಯತೆ ಇಲ್ಲ ಎಂದು ನ್ಯಾಯಾಧೀಶರು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

 ದಿವಾಳಿತನದ ಆದೇಶವನ್ನು ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟದ ಪರವಾಗಿ ನೀಡಬೇಕೆಂದು    ಭಾರತೀಯ ಬ್ಯಾಂಕುಗಳನ್ನು ಕಾನೂನು ಸಂಸ್ಥೆ ಮತ್ತು ನ್ಯಾಯವಾದಿ ಮಾರ್ಸಿಯಾ ಶೆಕರ್ಡೆಮಿಯನ್ ವಾದಿಸಿದ್ದರು.

Leave a Comment