ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಾ ಇದೆ. ಈ ಮಧ್ಯೆ BA.4 ಹಾಗೂ BA.5 ಎಂಬ ಒಮಿಕ್ರಾನ್‌ನ ಎರಡು ಉಪತಳಿಗಳು ಪತ್ತೆಯಾಗಿವೆ. ಈ ಕುರಿತು ಹೆಚ್ಚಿನ ಅಧ್ಯಯನಕ್ಕೆ ವೈರಾಲಜಿಸ್ಟ್ ಮುಂದಾಗಿದ್ದು, ಲಕ್ಷಣಗಳೇನು, ಎಷ್ಟು ಅಪಾಯಕಾರಿ ಎಂಬುದು ತಿಳಿಯಲಿದೆ.
ಒಮಿಕ್ರಾನ್ ನ BA.2 ಮೂರನೇ ಅಲೆಯಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿತ್ತು. ಈಗ ಒಮಿಕ್ರಾನ್‌ನ
BA.4 ಹಾಗೂ BA.5 ಉಪತಳಿ ಪತ್ತೆಯಾಗಿದೆ. ಈ ಉಪತಳಿ BA.2ನ ಸೀಕ್ವೆನ್ಸ್‌ಗಿಂತ ವಿಭಿನ್ನ ಎಂದು ಹೇಳಲಾಗುತ್ತಿದೆ.















