Coastal Bulletin

ಬೆಂಗಳೂರು: ಪೆಟ್ರೋಲ್, ಡೀಸೆಲ್, ಗೃಹ, ವಾಣಿಜ್ಯ ಬಳಕೆ ಗ್ಯಾಸ್, ಸಿಎನ್ ಜಿ, ತರಕಾರಿ, ವಿದ್ಯುತ್ ಎಲ್ಲ ವಸ್ತುಗಳ ದರ ಏರಿಕೆಯ ಬೆನ್ನಲ್ಲೇ ಇದೀಗ ಹಾಲಿನ ದರದಲ್ಲಿ ಹೆಚ್ಚು ಆಗುವ ಸಾಧ್ಯತೆ ಇದೆ.

ಈ ವಿಷಯವಾಗಿ ಹಾಲು ಒಕ್ಕೂಟಗಳು ಸರ್ಕಾರ ಪ್ರಸ್ತಾವನೆ ಕಳಿಸಿದ್ದು, 5 ರೂಪಾಯಿ ಹೆಚ್ಚಳ ಮಾಡುವಂತೆ ಕೋರಿವೆ ಎಂಬ ಮಾಹಿತಿ ದೊರೆತಿದೆ.

ಮೂಲಗಳ ಮಾಹಿತಿ ಪ್ರಕಾರ,

ಏಪ್ರಿಲ್ 10ರಂದು ಕರ್ನಾಟಕ ಹಾಲು ಮಹಾ ಮಂಡಳಿಯ ಸದಸ್ಯರು ಮುಖ್ಯಮಂತ್ರಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ಆ ಬಳಿಕ ಹಾಲಿನ ದರ ಹೆಚ್ಚಳವಾಗುವ ಅಂದಾಜು ಇದೆ. 

Leave a Comment