ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಬಿಎಂಟಿಸಿ ಸಿಹಿಸುದ್ದಿ ನೀಡಿದೆ. ಪ್ರಯಾಣಿಕರಿಗಾಗಿ ಮೊಬೈಲ್ ಪಾಸ್ ಜಾರಿಗೆ ತರಲು ಬಿಎಂಟಿಸಿ ಮುಂದಾಗಿದೆ. ಇಂದು ಮೊಬೈಲ್ ಪಾಸ್ ಗೆ ಚಾಲನೆ ನೀಡಲಿದೆ.
ಬಿಎಂಟಿಸಿಯ ಮೊಬೈಲ್ ಪಾಸ್ ಅನ್ನು ಪ್ರಯಾಣಿಕರು ಮೊಬೈಲ್ ಅಪ್ಲಿಕೇಶನ್ ಮೂಲಕ ಪಾಸ್ ಖರೀದಿ ಮಾಡಬಹುದಾಗಿದ್ದು, ಮೊಬೈಲ್ ನಲ್ಲೇ ಪಾಸ್ ತೋರಿಸಿ ಇನ್ಮುಂದೆ ಪ್ರಯಾಣಿಸಬಹುದು.
ಮೊಬೈಲ್ ಆ್ಯಪ್‌ನನ್ನು ಬಸ್‌ನ ನಿರ್ವಾಹಕರ ಬಳಿಯ ಎಲೆಕ್ಟ್ರಾನಿಕ್ ಟಿಕೆಟ್ ಮಿಷನ್‌ನಲ್ಲಿ ಸ್ಕ್ಯಾನ್
ಮಾಡಿ ಪ್ರಯಾಣಿಬಹುದಾಗಿದೆ. ಇದರಿಂದ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್ ಖರೀದಿಸುವ ಅಗತ್ಯವಿಲ್ಲವಾಗಲಿದೆ. ಇಷ್ಟು ದಿನ ಪೇಪರ್ ರೂಪದಲ್ಲಿ ಬಿಎಂಟಿಸಿ ಬಸ್ ನೀಡಲಾಗ್ತಿತ್ತು. ಇದೀಗ ಪಾಸ್ ನನ್ನು ಮೊಬೈಲ್ನಲ್ಲೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡ್ಬಹುದು.














