ಬೆಂಗಳೂರು : ಬಿಲ್ಲವ ಅಸೋಸಿಯೇಷನ್ ಬೆಂಗಳೂರು ವತಿಯಿಂದ ಸಾಮಾಹಿಕ ಸತ್ಯನಾರಾಯಣ ಪೂಜಾ ಸಮೇತ ಮಹಿಳಾ ದಿನಾಚರಣೆ 2023 ಮಾ.5 ರಂದು ದೇವಕಿ ಆನಂದ ಸುವರ್ಣ ಕನ್ವೆನ್ ಷನ್ ಹಾಲ್ ಬಿಲ್ಲವ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕಲ್ಬುರ್ಗಿ ಪ್ರಧಾನ ವ್ಯವಸ್ಥಾಪಕರು ಶ್ರೀಮತಿ ಪ್ರಮೀಳಾ ಎಂ.ಕೆ. ನೆರವೇರಿಸಲಿದ್ದಾರೆ. ಮಾಜಿ ಸದಸ್ಯರು, ಬಿ.ಬಿ.ಎಂ.ಪಿ ಬೆಂಗಳೂರು ಶ್ರೀಮತಿ ಭಾಗ್ಯಲಕ್ಷ್ಮೀ ಮುರಳಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ, ಉಪ ಆಯುಕ್ತರು ಬೆಂಗಳೂರು ಶ್ರೀಮತಿ ಸುಮನ ಪರಮೇಶ್ವರ್ ,
ಸಹಾಯಕ ಪೊಲೀಸ್ ಆಯುಕ್ತರು ಬೆಂಗಳೂರು ಶ್ರೀಮತಿ ರೀನಾ ಸುವರ್ಣ , ಮಾಜಿ ನಾಯಕಿ ಭಾರತೀಯ ಮಹಿಳಾ ಕಬಡ್ಡಿ ತಂಡ ಶ್ರೀಮತಿ ಮಮತಾ ಪೂಜಾರಿ ಇವರೆಲ್ಲರೂ ಭಾಗವಹಿಸಲಿದ್ದಾರೆ.
ಕರ್ನಾಟಕ ಪ್ರದೇಶ ಆರ್ಯ ಈಡಿಗ ಮಹಿಳಾ ಸಂಘ ಅಧ್ಯಕ್ಷರು ಡಾ.ನಳಿನಾಕ್ಷಿ ಸಣ್ಣಪ್ಪ ಇವರಿಗೆ ಸನ್ಮಾನಿಸಲಿದ್ದಾರೆ.














